- ಕೃಷಿ ಸುದ್ದಿ
- December 30, 2022
- No Comment
- 881
ಅಡಿಕೆ ಕೃಷಿಗೆ ಭವಿಷ್ಯ ಇಲ್ಲ – 5ರಿಂದ 10 ವರ್ಷಗಳಲ್ಲಿ ಅಡಿಕೆ ಬೆಳೆಗಾರರಿಗೆ ಕಾದಿದೆ ಸಂಕಷ್ಟ

ಕೃಷಿ ಲೋಕ : ಭವಿಷ್ಯದಲ್ಲಿ ಅಡಿಕೆ ಕೃಷಿಗೆ ಬೇಡಿಕೆಯಿರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕೃಷಿಕರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಈಚೆಗೆ ಅಡಕೆಗೆ ಭಾರೀ ಬೆಲೆ ಬಂದಿದ್ದರಿಂದ ದೊಡ್ಡ ಸಮಸ್ಯೆಯಾಗಿದೆ. ಕೃಷಿಕರು ಇದೀಗ ಅಡಿಕೆ ಕೃಷಿಯತ್ತ ವಾಲಿದ್ದು, ಇದರಿಂದ ಭವಿಷ್ಯದಲ್ಲಿ ಬೇಡಿಕೆ ಕಡಿಮೆಯಾಗುವ ಸೂಚನೆಯನ್ನು ನೀಡುತ್ತಿದೆ ಎಂದು ಆತಂಕಕಾರಿ ವಿಷಯವನ್ನು ಮುಂದಿಟ್ಟರು.
ಬಯಲು ಸೀಮೆಯಲ್ಲಿ ಅಡಿಕೆ ಕೃಷಿ ವ್ಯಾಪಿಸಿಕೊಳ್ಳುತ್ತಿದೆ. ವರ್ಷದಲ್ಲಿ 1 ಕೋಟಿ ಅಡಿಕೆ ಸಸಿ ನರ್ಸರಿಗಳಲ್ಲಿ ಖಾಲಿಯಾಗಿವೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಇನ್ನು 5-10 ವರ್ಷದಲ್ಲಿ ಅಡಿಕೆ ಬೆಳೆಗಾರರು ಬೀದಿಗೆ ಬರುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಿಯಮ 69 ಅಡಿಯಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಪಾಲ್ಗೊಂಡ ಶಾಸಕ ಎಚ್.ಡಿ. ರೇವಣ್ಣ, ನಾನು ಕೂಡ 40 ಎಕರೆಯಲ್ಲಿ ಅಡಿಕೆ ಹಾಕಿದ್ದೇನೆ ಎಂದದ್ದು ಚರ್ಚೆ ಇನ್ನಷ್ಟು ಕಾವೇರಲು ಕಾರಣವಾಯಿತು.