- ಕೃಷಿ ಸುದ್ದಿ
- September 22, 2022
- No Comment
- 5077
ಕರಾವಳಿ ಭಾಗದ ಜನರ ಕುಮ್ಕಿ ಜಮೀನು ಸಕ್ರಮಕ್ಕೆ ಶೀಘ್ರ ಕ್ರಮ – ಡ್ರೋಣ್ ಮೂಲಕ ನಡೆಯಲಿದೆ ಸರ್ವೆ…

ಕೃಷಿ ಲೋಕ : ಕರಾವಳಿ ಭಾಗದಲ್ಲಿ ಉಳುಮೆ ಮಾಡುತ್ತಿರುವವರ ಗೋಮಾಳ, ಗಾಯಗಾಣ, ಸನ ಭಟ್ಟ, ಕುಮ್ಕಿ ಜಮೀನು ಸಕ್ರಮಕ್ಕೆ ರಾಜ್ಯ ಸರ್ಕಾರ ಕ್ರಮ ವಹಿಸುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ್ ಈ ಉತ್ತರ ನೀಡಿದ್ದಾರೆ.
ಸ್ವಾತಂತ್ರ್ಯ ಪೂರ್ವದಿಂದ ಉಳುಮೆ ಮಾಡಿಕೊಂಡು ಬಂದವರಿಗೆ ಕುಮ್ಕಿ ಇತ್ಯಾದಿ ಜಾಗ ನೋಂದಣಿ ಮಾಡಿಕೊಡುವ ಕುರಿತು ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ. ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ವಾತಂತ್ರ್ಯ ಪೂರ್ವದಿಂದಲೂ ಕರಾವಳಿ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ಕುಮ್ಕಿ, ಕಾನೆಬಾನೆ ಜಮೀನು ಉಳುಮೆ ಮಾಡಿಕೊಂಡು ಬಂದಿದ್ದಾರೆ.
ಇವುಗಳ ಸಕ್ರಮಕ್ಕೆ ಹಿಂದಿನ ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ. ಈ ಜಾಗದಲ್ಲಿ ಉಳುಮೆ ಮಾಡುತ್ತಿರುವವರ ಸ್ವಾಧೀನದಲ್ಲಿರುವ ಗೋಮಾಳ, ಸೊಪ್ಪಿನಬೆಟ್ಟ, ಗಾಯರಾಣ, ಹುಲ್ಲಬನ್ನಿ ಜಾಗವನ್ನು ಯಾವ ರೀತಿ ಕಾನೂನಾತ್ಮಕವಾಗಿ ಅವರಿಗೆ ದಾಖಲೆ ಮಾಡಿಕೊಟ್ಟು ನ್ಯಾಯ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸಿಎಂ ಮತ್ತು ನಾನು ಇಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಿ ಸಮಿತಿ ರಚಿಸಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇನ್ನೂ ಐದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಡ್ರೋಣ್ ಮೂಲಕ ಆಸ್ತಿಗಳ ರೀ ಸರ್ವೆ ಮಾಡಲಾಗುತ್ತಿದ್ದು, ಮುಂದಿನ ಮೂರು ವರ್ಷದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಡ್ರೋಣ್ ಸರ್ವೆ ಕಾರ್ಯ ಮುಗಿಸಿ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 100 ತಾಲೂಕುಗಳಲ್ಲಿ ಕಂದಾಯ ದಾಖಲೆಗಳಿಗೆ ಯುಎನ್ಪಿನ್ ಅಳವಡಿಸಲಾಗಿದೆ. ಸರ್ವೆ ದಾಖಲೆ ಡಿಜಿಟಲ್ಗೆ 10 ಕೋಟಿ ಕೊಡಲಾಗಿದೆ. ಹಳೆ ಕಂದಾಯ ದಾಖಲೆ ಹಾಳಾಗುತ್ತಿದ್ದು, ಅದರ ಡಿಜಿಟಲೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ 317 ಸ್ಲ್ಯಾನರ್ ಖರೀದಿಸಲಾಗಿದೆ. ಡ್ರೋಣ್ ಬಳಸಿ ರೀ ಸರ್ವೇ ಕಾರ್ಯ ನಡೆಸಿ, ಗಡಿ ಗುರುತಿಸಿ ದಾಖಲೆ ಮಾಡಲಾಗುತ್ತಿದೆ. ಈಗಾಗಲೇ 5 ಜಿಲ್ಲೆಯಲ್ಲಿ ಮಾಡಲಾಗುತ್ತಿದೆ. ರಾಮನಗರ ಜಿಲ್ಲೆಯ ಡ್ರೋಣ್ ಸರ್ವೆ ಮುಗಿದಿದೆ ಎಂದರು.