ರಾಜ್ಯದಲ್ಲಿ ರಸಗೊಬ್ಬರದ ಬೆಲೆಯಲ್ಲಿ ಭಾರಿ ಏರಿಕೆ – ಪೊಟ್ಯಾಷ್ ದುಬಾರಿ..!! ಬೆಲೆ ಏರಿಕೆಗೆ ಕಾರಣ ಏನು? ಇಲ್ಲಿದೆ ಸಮಗ್ರ ಮಾಹಿತಿ

ರಾಜ್ಯದಲ್ಲಿ ರಸಗೊಬ್ಬರದ ಬೆಲೆಯಲ್ಲಿ ಭಾರಿ ಏರಿಕೆ – ಪೊಟ್ಯಾಷ್ ದುಬಾರಿ..!! ಬೆಲೆ ಏರಿಕೆಗೆ  ಕಾರಣ ಏನು? ಇಲ್ಲಿದೆ ಸಮಗ್ರ ಮಾಹಿತಿ

ಕೃಷಿ ಲೋಕ : ರಾಜ್ಯದಲ್ಲಿ ಪೊಟ್ಯಾಷ್ ರಸಗೊಬ್ಬರ ದರ ದಿಢೀರೆಂದು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ದರ ಏರಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಗೊಬ್ಬರದ ಕೊರತೆ ಉಂಟಾಗಿದೆ. ಪೊಟ್ಯಾಷ್ ಗೊಬ್ಬರ ಸಿಗದೆ ಕಬ್ಬು, ಬಾಳೆ, ತೆಂಗು, ಕಲ್ಲಂಗಡಿ ಬೆಳೆಗಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಕಳೆದ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ 50 ಕೆ.ಜಿ. ಪೊಟ್ಯಾಷ್‍ಗೆ 950-1050 ರೂ. ಇದ್ದುದು ದಿಢೀರ್ 1700 ರೂ. ಗೆ ಏರಿಕೆಯಾಗಿ ರೈತರನ್ನು ಕಂಗೆಡಿಸಿದೆ. ಒಂದೆಡೆ ಕೃಷಿ ಇಲಾಖೆಯು ರಸಗೊಬ್ಬರದ ಕೊರತೆಯಿಲ್ಲ ಎನ್ನುತ್ತಿದೆ. ಆದರೆ ಮಾರಾಟಗಾರರು ಪೊಟ್ಯಾಷ್ ಸ್ಟಾಕ್ ಇಲ್ಲ. ಇದಕ್ಕೆ ಬದಲಿಯಾಗಿ ಎಸ್‍ಒಪಿ (ಫಾಸ್ಪರಸ್ ಆಫ್ ಸಲ್ಫೇಟ್) ಯನ್ನು ಬಳಸಿ ಎಂದು ರೈತರಿಗೆ ಸಲಹೆ ನೀಡುತ್ತಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಡಿಎಪಿ, ಪೊಟ್ಯಾಷ್ ಮೊದಲಾದ ರಸಗೊಬ್ಬರಗಳ ಬೆಲೆಯಲ್ಲಿ ಶೇ.30ರವರೆಗೆ ಏರಿಕೆ ಮಾಡಲಾಗಿತ್ತು. ಇದನ್ನು ಸುಧಾರಿಸಿಕೊಳ್ಳುವ ಮುನ್ನವೇ ಪೊಟ್ಯಾಷ್ ದರ ಏರಿಕೆ ಮಾಡಲಾಗಿದೆ. ವರ್ಷಕ್ಕೆ ಎರಡು ಮೂರು ಬಾರಿ ರಸಗೊಬ್ಬರಗಳ ದರ ಹೆಚ್ಚಿಸಿದರೆ ಅನ್ನದಾತರು ಏನು ಮಾಡಬೇಕು ಎಂದು ಅನ್ನದಾತರು ಪ್ರಶ್ನಿಸುತ್ತಿದ್ದಾರೆ.

ಉತ್ತಮ ಇಳುವರಿಗೆ ಪೊಟ್ಯಾಷ್ ಅಗತ್ಯ

ಕಬ್ಬು, ಬಾಳೆ, ತೆಂಗು, ಕಲ್ಲಂಗಡಿ, ಟೊಮ್ಯಾಟೊ ಸೇರಿದಂತೆ ನಾನಾ ಬೆಳೆಗಳಿಗೆ ಪೊಟ್ಯಾಷ್ ಬಳಸಿದರೆ ಉತ್ತಮ ಇಳುವರಿ ಬರಲಿದೆ. ಅದರಲ್ಲೂ ತೆಂಗು, ಬಾಳೆ, ಅಡಕೆ, ಮಾವು ಮತ್ತಿತರ ವಾಣಿಜ್ಯ ಬೆಳೆಗಳಿಗೆ ಸಕಾಲದಲ್ಲಿ ಪೊಟ್ಯಾಷ್ ಗೊಬ್ಬರ ಹಾಕದಿದ್ದರೆ ಗೊನೆ ಉತ್ತಮ ಫಸಲು ಸಿಗುವುದಿಲ್ಲ. ದುಬಾರಿ ಬೆಲೆ ಕೊಟ್ಟು ಖರೀದಿಸೋಣ ಎಂದರೆ ಎಲ್ಲಿ ಹುಡುಕಿದರೂ ಪೊಟ್ಯಾಷ್ ಖಾಲಿಯಾಗಿದೆ ಎನ್ನುತ್ತಿದ್ದಾರೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೆಲೆ ಏರಿಕೆಗೆ ಕಾರಣವೇನು?

ಕಚ್ಚಾವಸ್ತುಗಳ ದರ ಏರಿಕೆಯಾದ ಹಿನ್ನೆಲೆಯಲ್ಲಿ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ದರ ಏರಿಕೆ ಮಾಡಲಾಗಿದೆ. ಚೀನಾ, ಆಫ್ರಿಕಾ, ದುಬೈ ಮತ್ತಿತರ ದೇಶಗಳಿಂದ ರಸಗೊಬ್ಬರದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಇದೀಗ ಕೋವಿಡ್‍ನಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಜತೆಗೆ ಶಿಪ್ ಕಂಟೈನರ್ ದರ ಕೂಡ ಏರಿಕೆಯಾಗಿದೆ. ಹೀಗಾಗಿ ಪೊಟ್ಯಾಷ್ ದರದಲ್ಲಿ ಏರಿಕೆಯಾಗಿದೆ. ಬೆಲೆ ಏರಿಕೆಯಾಗಿದ್ದರೂ, ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ರೈತರಿಗೆ ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಯಾಗುತ್ತಿದೆ. ಜನವರಿ ತಿಂಗಳಲ್ಲಿ ಎಲ್ಲಾ ಬಗೆಯ ರಸಗೊಬ್ಬರಗಳಿಗೆ ರೈತರಿಂದ 3 ಲಕ್ಷ ಮೆಟ್ರಿಕ್ ಟನ್‍ಗೂ ಅಧಿಕ ಬೇಡಿಕೆಯಿದ್ದು, ಕೇಂದ್ರ ಸರಕಾರ 3.45 ಲಕ್ಷ ಮೆಟ್ರಿಕ್ ಟನ್‍ಗೂ ಹೆಚ್ಚು ರಸಗೊಬ್ಬರಗಳನ್ನು ಪೂರೈಸಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

Related post

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ ಲಾಭ ಗಳಿಸಬಹುದು – ಟಾಪ್ 10 ಉದ್ಯಮಗಳ ಮಾಹಿತಿ ಇಲ್ಲಿವೆ ನೋಡಿ…

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ…

ನ್ಯೂಸ್ ಆ್ಯರೋ : ಯಾವುದೇ ಲಾಭದಾಯಕ ವ್ಯವಹಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಬಹುದು. ಆದರೆ ವ್ಯಾಪಾರ ಕೈಹಿಡಿಯುವುದು ತುಂಬಾನೇ ಕಷ್ಟ.…
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ…

ನ್ಯೂಸ್ ಆ್ಯರೋ‌ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ…

Leave a Reply

Your email address will not be published. Required fields are marked *