ದ. ಕ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತ ಸಂಸ್ಥೆಯ (SCCFPCL) ನೂತನ ವೆಬ್ಸೈಟ್ ಬಿಡುಗಡೆ

ದ. ಕ ಜಿಲ್ಲಾ ತೆಂಗು ರೈತ ಉತ್ಪಾದಕರ  ಕಂಪನಿ ನಿಯಮಿತ  ಸಂಸ್ಥೆಯ (SCCFPCL) ನೂತನ ವೆಬ್ಸೈಟ್ ಬಿಡುಗಡೆ

ಕೃಷಿಲೋಕ : ವಿಟ್ಲದಲ್ಲಿ ಕೇಂದ್ರ ಕಛೇರಿ ಹೊಂದಿರುವ ದ ಕ ಜಿಲ್ಲೆ ಯಲ್ಲಿ ತೆಂಗು ಕೃಷಿಕರಿಗೆಂದೇ ಹುಟ್ಟಿಕೊಂಡ ದ ಕ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆ ಯ (SCCFPCL) ಅಧಿಕೃತ ವೆಬ್ಸೈಟನ್ನು ದಿನಾಂಕ 10/01/2021 ನೇ ಸೋಮವಾರದಂದು CPCRI ಕೀಡು ನೆಟ್ಟಣ ಇಲ್ಲಿ ನಡೆದ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಭಾರತ ಸರಕಾರದ ಸಂಸ್ಥೆಯಾದ ICAR-CPCRI ಇದರ ಮುಖ್ಯಸ್ಥರು ಅನಿತಾ ಕರುಣ್ ರವರು ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮೋಹನ್ ರಾಮ್ ಸುಳ್ಳಿ, ವಿಜ್ಞಾನಿಗಳಾದ ಡಾ ಯದುಕುಮಾರ್, ಡಾ. ದಿವಾಕರ್, ಡಾ ಹೆಬ್ಬಾರ್,ಡಾ. ನಾಗರಾಜ್, ಡಾ. ನಿರಾಲ್, ತೆಂಗು ರೈತ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಮತ್ತು ಸಿಬ್ಬಂದಿವರ್ಗದವರು, ರೈತರು ಮತ್ತು ವಿಟ್ಲ ಕಾಸರಗೋಡು ಕೀಡು CPCRI ನ ವಿಜ್ಞಾನಿ ಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನೂತನ ವೆಬ್ಸೈಟ್ನಲ್ಲಿ ರೈತರಿಗೆ ಸಂಸ್ಥೆಯಿಂದ ಆಗುವಂತಹ ಉಪಯೋಗಗಳು, ಸಂಸ್ಥೆಯ ವತಿಯಿಂದ ನಡೆಯುವ ಕಾರ್ಯಕ್ರಮಗಳ ವಿವರಗಳು ಹಾಗು ಪ್ರಕಟಣೆಗಳು ಸೇರಿದಂತೆ ಸಮಗ್ರ ಮಾಹಿತಿಗಳು ಲಭ್ಯವಿದೆ ನೂತನ ವೆಬ್ಸೈಟ್ ನ ವಿಳಾಸ ಇಂತಿದೆ https://coconutfarmers.in/

ಈಗಾಗಲೇ ದ. ಕ ಜಿಲ್ಲಾ ತೆಂಗು ರೈತ ಸಂಸ್ಥೆ (SCCFPCL) ಸುಳ್ಯ ತಾಲ್ಲೂಕಿನಲ್ಲಿ ಮಾಹಿತಿ ಕಛೇರಿ ತೆರೆದಿದ್ದು ಇನ್ನು ಕೆಲವೇ ದಿನಗಳಲ್ಲಿ 4 ಜಿಲ್ಲೆ ಗಳಲ್ಲಿ ಕಛೇರಿಗಳನ್ನು ತೆರೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

Related post

Leave a Reply

Your email address will not be published. Required fields are marked *