- ಕೃಷಿ ಸುದ್ದಿಹೈನುಗಾರಿಕೆ
- March 24, 2022
- No Comment
- 2662
ದೇಶದಲ್ಲೇ ಮೊಟ್ಟಮೊದಲ ‘ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್’ ಕರ್ನಾಟಕದಲ್ಲಿ ಪ್ರಾರಂಭ : ಏನಿದು ಬ್ಯಾಂಕ್ ? ಹೈನುಗಾರರಿಗೆ ಇದರ ಉಪಯೊಗಳೇನು? ಇಲ್ಲಿದೆ ಮಾಹಿತಿ..

ಕೃಷಿ ಲೋಕ : ದೇಶದಲ್ಲೇ ಮೊಟ್ಟಮೊದಲ ‘ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್’ ಕರ್ನಾಟಕದಲ್ಲಿ ಪ್ರಾರಂಭವಾಗಲಿದೆ. ಹೈನುಗಾರಿಕೆ ಮಾಡುವವರಿಗೆ ಮತ್ತು ಹೈನುಗಾರಿಕೆಗೆ ಸಂಬಂಧ ಪಟ್ಟ ಇತರ ಉದ್ಯೋಗಕ್ಕೆ ಸಂಬಂಧ ಪಟ್ಟಂತೆ ಸಾಲ ಸೌಲಭ್ಯ ನೀಡಲು ಹಾಗೂ ಇತರೆ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಈ ಸಹಕಾರಿ ಬ್ಯಾಂಕನ್ನು ಸ್ಥಾಪಿಸಲಾಗುತ್ತಿದೆ.
ಇತ್ತೀಚಿಗಷ್ಟೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇವರು ಮಂಡಿಸಿದ ಬಜೆಟ್’ನಲ್ಲಿ ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ಕಲ್ಪಿಸಲು ‘ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್’ ಹಾಗೂ ಗೋ ಉತ್ಪನ್ನಗಳ ಮಾರಾಟಕ್ಕೆ ‘ಗೋ ಮಾತಾ ಸಹಕಾರ ಸಂಘ’ ಸ್ಥಾಪಿಸುವುದಾಗಿ ರಾಜ್ಯ ಸರಕಾರ ಬಜೆಟ್‌ನಲ್ಲಿ ಘೋಷಿಸಿದೆ. ಇದೀಗ ಮೊದಲನೇ ಹಂತದಲ್ಲಿ ಬ್ಯಾಂಕ್ ಸ್ಥಾಪನೆ ಮಾಡಲು ಆದೇಶಿಸಿದ್ದು, ಬ್ಯಾಂಕ್ ಸ್ಥಾಪನೆ ಸಂಬಂಧ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಆದೇಶ ಹೊರಡಿಸಿದರು.
ಈ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆಗೆ ಹಾಲು ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ಹಾಲು ಮಹಾಮಂಡಳ ಮತ್ತು ಜಿಲ್ಲಾ ಹಾಲು ಒಕ್ಕೂಟಗಳು ಒಟ್ಟಾರೆ 260 ಕೋಟಿರೂ ಗಳನ್ನು ಹಾಗೂ ರಾಜ್ಯ ಸರ್ಕಾರ 100 ಕೋಟಿ ರು.ಗಳನ್ನು ಷೇರು ಬಂಡವಾಳ ರೂಪದಲ್ಲಿ ಒದಗಿಸಲಿವೆ.
ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕಿನ ಸದಸ್ಯತ್ವ ಹೇಗೆ?
ಈ ಬ್ಯಾಂಕಿನ ಸದಸ್ಯತ್ವ ಪಡೆಯಲು ಎ, ಬಿ, ಸಿ,ಡಿ ಎಂಬ ನಾಲ್ಕು ವರ್ಗಗಳನ್ನಾಗಿ ವಿಂಗಡಿಸಲಾಗಿದೆ.
- ‘ಎ’ ವರ್ಗದಲ್ಲಿ ರಾಜ್ಯದಲ್ಲಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರು ಬರಲಿದ್ದು, 1000 ರು. ಮೌಲ್ಯದ ಕನಿಷ್ಠ 1 ಷೇರು ಪಡೆಯಬೇಕು.
- ಬಿ’ ವರ್ಗದ ಸದಸ್ಯರಾಗಿ ರಾಜ್ಯದಲ್ಲಿನ ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಬರಲಿದ್ದು, 10,000 ರು. ಮೌಲ್ಯದ ಕನಿಷ್ಠ 1 ಷೇರು ಪಡೆಯಬೇಕು.
- ಸಿ’ ವರ್ಗದಲ್ಲಿ ಕರ್ನಾಟಕ ರಾಜ್ಯದ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳು ಬರಲಿದ್ದು 1 ಕೋಟಿ ರು. ಮೌಲ್ಯದ ಕನಿಷ್ಠ 1 ಷೇರು ಪಡೆಯಬೇಕು.
- ‘ಡಿ’ ವರ್ಗದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ಬರಲಿದ್ದು ಸದಸ್ಯತ್ವ ಪಡೆಯಲು 50 ಕೋಟಿ ರು. ಮೌಲ್ಯದ ಕನಿಷ್ಠ 1 ಷೇರು ಪಡೆಯಬೇಕು.