- ಕೃಷಿ ಉದ್ಯಮ
- March 18, 2022
- No Comment
- 3606
ಕಡಿಮೆ ಖರ್ಚಿನಿಂದ ಕೈ ತುಂಬಾ ಲಾಭ, ಒಮ್ಮೆ ಬಿತ್ತನೆ ಮಾಡಿದರೆ ಸಾಕು – ಅಲೋವೆರಾ ಕೃಷಿಯ ಬಗ್ಗೆ ಮಾಹಿತಿ ಇಲ್ಲಿದೆ.

ಕೃಷಿಲೋಕ : ಅಲೋವೆರಾ ಕಡಿಮೆ ಖರ್ಚಿನಲ್ಲಿ ಲಾಭ ಗಳಿಸಬಹುದಾದ ಕೃಷಿ. ಈ ಕೃಷಿಗೆ ಎಕರೆಗಟ್ಟಲೆ ಜಾಗ ಬೇಕೆಂದಿಲ್ಲ, ಮನೆಯ ಅಂಗಳದಲ್ಲೂ ಕೂಡ ಇದನ್ನು ಸುಲಭವಾಗಿ ಬೆಳೆಯಬಹುದು. ಸಾಕಷ್ಟು ಗೊಬ್ಬರದ ವೆಚ್ಚ ಇದಕ್ಕೆ ಬೇಕಾಗಿಲ್ಲ, ಯಾವುದೇ ಹವಾಮಾನ ವಾದರೂ ಸರಿ ಈ ಕೃಷಿ ಲಾಭ ಗಳಿಕೆಗೆ ಸೈ….

ಹೌದು.. ಇಂತಹ ಒಂದು ಸುಲಭವಾದ ಅಲೋವೆರಾ ಕೃಷಿಯ ಬಗ್ಗೆ ಮಾಹಿತಿ ತಿಳಿಯೋಣ.
ಅಲೋವೆರಾವು ಹಲವಾರು ಆರೋಗ್ಯ ಲಾಭಗಳನ್ನು ಹೊಂದಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇಂದಿನ ದಿನಗಳಲ್ಲಿ ಸೌಂದರ್ಯವರ್ಧಕವಾಗಿ ಅಲೋವೆರಾವನ್ನು ಬಳಸದೆ ಇರುವವರು ತುಂಬಾ ಕಡಿಮೆ. ಯಾಕೆಂದರೆ ಅಲೋವೆರಾದಲ್ಲಿ ಇರುವಂತಹ ಸೌಂದರ್ಯವರ್ಧಕ ಗುಣಗಳು ಬೇರೆ ಯಾವುದೇ ರೀತಿಯ ಸಾಮಗ್ರಿಗಳಲ್ಲೂ ನಿಮಗೆ ಸಿಗಲಾರದು.
ಹೀಗಾಗಿ ಅಲೋವೆರಾವು ತುಂಬಾ ಪರಿಣಾಮಕಾರಿಯಾಗಿ ಸೌಂದರ್ಯವರ್ಧಕ ಉತ್ಪನ್ನಗಳಲ್ಲೂ ಬಳಕೆ ಮಾಡಲಾಗುತ್ತಿದೆ. ನೇರವಾಗಿ ಅಲೋವೆರಾ ಲೋಳೆಯನ್ನು ಮೈಗೆ ಹಚ್ಚಿಕೊಂಡರೂ ಅದರ ಲಾಭಗಳು ಸಿಗುತ್ತದೆ. ಇದು ಕೆಲವೊಂದು ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಜತೆಗೆ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಇದಕ್ಕೆ ಗೋವಿನಜೋಳ ಎಂದೂ ಕರೆಯುತ್ತಾರೆ. ಇದನ್ನು ನೀರಾವರಿ ಅಥವಾ ನೀರಾವರಿಯಲ್ಲದ ಪರಿಸ್ಥಿತಿಯಲ್ಲಿ ಬೆಳೆಯಬಹುದು.
ಅಲೋವೆರಾದ ಕೃಷಿ ಯಾವ ರೀತಿ ಮಾಡಲಾಗುತ್ತದೆ?
ಮಳೆಗಾಲದಲ್ಲಿ ರೈತರು ಇದರ ಗೆಡ್ಡೆಗಳನ್ನು ಬಿತ್ತುತ್ತಾರೆ. ಸಸ್ಯಗಳು ಮತ್ತು ಸಾಲುಗಳ ನಡುವೆ ಒಂದು ಮೀಟರ್ ಅಂತರವನ್ನು ಇರಿಸಲಾಗುತ್ತದೆ. ಈ ಮೂಲಕ ಒಂದು ಹೆಕ್ಟೇರ್‌ನಲ್ಲಿ ಸುಮಾರು 40 ಸಾವಿರ ಸಸಿಗಳನ್ನು ನೆಡಬಹುದು. ವಿಸ್ಮಯಕಾರಿ ಸಂಗತಿಯೆಂದರೆ, ಒಮ್ಮೆ ಬಿತ್ತನೆ ಮಾಡಿದರೆ 4-5 ವರ್ಷಗಳವರೆಗೆ ಉತ್ಪಾದನೆಯನ್ನು ಸಾಧಿಸಲಾಗುತ್ತದೆ.

ತಾಜಾ ಅಲೋವೆರಾ ಲೋಳೆಯನ್ನು ಕುಡಿದರೆ ಅದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುತ್ತದೆ ಮತ್ತು ಅಸಿಡಿಟಿಯಿಂದ ಬಳಲುವ ಸಮಸ್ಯೆಗೆ ಇದು ಪರಿಹಾರ ನೀಡುವುದು. ನೀವು ಅಲೋವೆರಾ ಲೋಳೆಯನ್ನು ಬೇರೆ ಜ್ಯೂಸ್ ಜತೆಗೆ ಸೇರಿಸಿಕೊಂಡು ಕುಡಿಯಬಹುದು. ಇದು ದೇಹವನ್ನು ಒಳಗಿನಿಂದಲೇ ಶುದ್ದೀಕರಿಸುವುದು. ಹೀಗಾಗಿ ಇದರ ಪರಿಣಾಮವು ಚರ್ಮದಲ್ಲಿ ಕಾಣಸಿಗುವುದು. ಚರ್ಮವು ಸ್ವಚ್ಛವಾಗಿ ಕಾಂತಿಯುತವಾಗಿರುವುದು,
ಇಷ್ಟೆಲ್ಲ ಉಪಯೋಗಕಾರಿಯಾದ ಅಲೋವೆರಾವನ್ನು ಕೃಷಿಯನ್ನಾಗಿ ರೂಢಿಸಿಕೊಂಡರೆ, ಹಲವಾರು ಪ್ರಯೋಜನಗಳ ಜೊತೆಗೆ ಕೈ ತುಂಬಾ ಲಾಭವನ್ನು ಕೂಡ ಗಳಿಸಬಹುದು.