ಕ್ಯಾಂಪ್ಕೋ ವತಿಯಿಂದ 2020-2021ನೇ ಸಾಲಿನ 15% ಲಾಭಾಂಶ ನೇರವಾಗಿ ರೈತರ ಖಾತೆಗೆ ಜಮಾವಣೆ : ಬ್ಯಾಂಕ್ ದಾಖಲೆ ಹಾಗೂ KYC ಮಾಡಿಸಲು ಸೂಚನೆ

ಕ್ಯಾಂಪ್ಕೋ ವತಿಯಿಂದ  2020-2021ನೇ ಸಾಲಿನ 15% ಲಾಭಾಂಶ ನೇರವಾಗಿ ರೈತರ ಖಾತೆಗೆ ಜಮಾವಣೆ : ಬ್ಯಾಂಕ್ ದಾಖಲೆ ಹಾಗೂ KYC ಮಾಡಿಸಲು ಸೂಚನೆ

ಕೃಷಿ ಲೋಕ : ಕ್ಯಾಂಪ್ಕೋ ಸಂಸ್ಥೆ, ಮಂಗಳೂರು ತನ್ನ ಸದಸ್ಯರಿಗೆ 2020-21 ನೇ ಸಾಲಿನ ಲಾಭಾಂಶ (ಡಿವಿಡೆಂಡ್) ಘೋಷಿಸಿದ್ದು ಸದಸ್ಯರಿಗೆ ವಾರ್ಷಿಕ 15% ಲಾಭಾಂಶ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ವಾರಂಟ್ ಪ್ರತಿಯನ್ನು ಸದಸ್ಯರಿಗೆ ಅಂಚೆ ಮುಖೇನ ಕಳಿಸದಿರುವುದರಿಂದ ಲಾಭಾಂಶ ವನ್ನು ನೇರವಾಗಿ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು. ಹಾಗಾಗಿ ಇದುವರೆಗೆ ಬ್ಯಾಂಕ್ ಖಾತೆ ವಿವರವನ್ನು ನೀಡದೆ ಇರುವ ಸದಸ್ಯರು ತಮ್ಮ ಬ್ಯಾಂಕಿನ ನವೀಕೃತ ಖಾತೆಯ ಪ್ರತಿಯನ್ನು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆಯಲ್ಲಿ ಅಥವಾ ಪ್ರಧಾನ ಕಚೇರಿಯಲ್ಲಿ ನೀಡಬೇಕೆಂದು ವಿನಂತಿಸಿದೆ.

ಇದುವರೆಗೆ KYC ಮಾಡದೇ ಇರುವ ಸದಸ್ಯರು ತಮ್ಮ ದಾಖಲೆಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಹಣಿ ಪತ್ರದ (RTC) ತೆರಿಗೆ ರಶೀದಿಗಳನ್ನು ಶಾಖೆಗೆ ಬಂದು ನೀಡಬೇಕಾಗಿದೆ.

ಅಲ್ಲದೆ ಚಾಕೊಲೇಟ್ (Gift box) ಶಾಖೆಯಲ್ಲಿದ್ದು ರೂ.100 ಮುಖ ಬೆಲೆಯ ಚಾಕೊಲೇಟ್ ರೂ.65 ರ ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಬೇಕಾದ ಸದಸ್ಯರು ತಮ್ಮ ಸದಸ್ಯತ್ವ ಸಂಖ್ಯೆಯನ್ನು ತಿಳಿಸಿ ಪಡೆದುಕೊಳ್ಳಬೇಕಾಗಿ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Related post

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ ಲಾಭ ಗಳಿಸಬಹುದು – ಟಾಪ್ 10 ಉದ್ಯಮಗಳ ಮಾಹಿತಿ ಇಲ್ಲಿವೆ ನೋಡಿ…

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ…

ನ್ಯೂಸ್ ಆ್ಯರೋ : ಯಾವುದೇ ಲಾಭದಾಯಕ ವ್ಯವಹಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಬಹುದು. ಆದರೆ ವ್ಯಾಪಾರ ಕೈಹಿಡಿಯುವುದು ತುಂಬಾನೇ ಕಷ್ಟ.…
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ…

ನ್ಯೂಸ್ ಆ್ಯರೋ‌ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ…

Leave a Reply

Your email address will not be published. Required fields are marked *