ಲಾಭದಾಯಕ ಪಾಲಕ್ ಸೊಪ್ಪಿನ ಕೃಷಿ ಮಾಡಲು ಇಲ್ಲಿದೆ ಸಲಹೆ – ಕಡಿಮೆ ಜಾಗದಲ್ಲೂ ಕಡಿಮೆ ಬಜೆಟ್ ನಲ್ಲಿ ಸಾವಿರಾರು ರೂಪಾಯಿ ಗಳಿಸಬಹುದು : ವಿವರಗಳಿಗೆ ಈ ವರದಿ ಓದಿ..

ಲಾಭದಾಯಕ ಪಾಲಕ್ ಸೊಪ್ಪಿನ ಕೃಷಿ ಮಾಡಲು ಇಲ್ಲಿದೆ ಸಲಹೆ – ಕಡಿಮೆ ಜಾಗದಲ್ಲೂ ಕಡಿಮೆ ಬಜೆಟ್ ನಲ್ಲಿ ಸಾವಿರಾರು ರೂಪಾಯಿ ಗಳಿಸಬಹುದು : ವಿವರಗಳಿಗೆ ಈ ವರದಿ ಓದಿ..

ಕೃಷಿ‌ ಲೋಕ : ಚಿಕ್ಕ ಹಿಡುವಳಿ, ಖಾಲಿ ನಿವೇಶನ ಮತ್ತು ಹಿತ್ತಲು ಇದ್ದವರು ಸೊಪ್ಪು ಬೆಳೆದು ಲಾಭ ಗಳಿಸಬಹುದು. ಯಾಕೆಂದರೆ ಸೊಪ್ಪು ಬೆಳೆಯಲು ಜಾಸ್ತಿ ಜಾಗ, ನಿರ್ವಹಣೆಯ ಅಗತ್ಯ ಇರುವುದಿಲ್ಲ. ಜತೆಗೆ ಅಲ್ಪಾವಧಿಯಲ್ಲೇ ಫಸಲು ಕೈಗೆ ಬರುತ್ತದೆ. ಇಂಥ ಲಾಭದಾಯಕ ಸೊಪ್ಪು ಬೆಳೆಗಳಲ್ಲಿ ಪಾಲಕ್ ಪ್ರಮುಖವಾದುದು.

How to cultivate Spinach (Palak)

ಹಾಗಿದ್ದರೆ ಪಾಲಕ್ ಬೆಳೆಯುವುದೇಗೆ..? ಬಿತ್ತನೆ ಹೇಗೆ ? ಸೇರಿದಂತೆ ಪಾಲಕ್ ಕೃಷಿಯ ಸಂಪೂರ್ಣ ಮಾಹಿತಿ ಇಲ್ಲಿದೆ..?

ಬೆಳೆಯುವ ವಿಧಾನ

ನೀರಾವರಿಯಾಶ್ರಿತವಾಗಿ ವರ್ಷದ ಎಲ್ಲ ತಿಂಗಳಲ್ಲೂ ಪಾಲಕ್ ಸೊಪ್ಪನ್ನು ಬೆಳೆಯಬಹುದು. ಮೊದಲು ಜಮೀನು ಹದ ಮಾಡಿದ ಬಳಿಕ ಸಾಲಿನಿಂದ ಸಾಲಿಗೆ 1 ಅಡಿ ಅಂತರದಲ್ಲಿ ಬೀಜ ಬಿತ್ತಬೇಕು. ಬೀಜದಿಂದ ಬೀಜಕ್ಕೆ 4- 5 ಇಂಚು ಅಂತರವಿದ್ದರೆ ಸಾಕು. ಬೀಜ ಬಿತ್ತಿದ ಮೇಲೆ ತೆಳುವಾಗಿ ಮಣ್ಣು ಹರಡಬೇಕು. ಬಳಿಕ ಐದಾರು ದಿನಕ್ಕೊಮ್ಮೆ ನೀರು ಹಾಯಿಸಬೇಕು. ಜಾಸ್ತಿ ನಿರ್ವಹಣೆ ಬಯಸದು. ಬೀಜ ಬಿತ್ತಿದ 4ರಿಂದ 6 ವಾರದೊಳಗೆ ಕಟಾವಿಗೆ ಬರುತ್ತದೆ.

ಇದನ್ನು ಬೇರು ಸಮೇತ ಕಟಾವು ಮಾಡದೆ ಕಾಂಡದ ಸ್ವಲ್ಪ ಭಾಗವನ್ನು ಭೂಮಿಯಲ್ಲೇ ಬಿಟ್ಟು ಗಿಡವನ್ನು ಕತ್ತರಿಸಬೇಕು. ನಂತರ ಅದೇ ಕಾಂಡವು ಚಿಗುರಿ ಮತ್ತೆ ಫಸಲು ಕೊಡುತ್ತದೆ. ಹೀಗೆ ನಾಲ್ಕೈದು ಬಾರಿ ಮಾಡಬಹುದು. ಮಾರುಕಟ್ಟೆ ಸ್ಥಿತಿಗತಿ ನೋಡಿಕೊಂಡು ಕಟಾವು ಮಾಡುವುದು ಒಳಿತು. ಇದಕ್ಕೆ ಕಪ್ಪು ಮಣ್ಣು ಇದ್ದರೆ ಉತ್ತಮ. ನೀರು ಸರಾಗವಾಗಿ ಹರಿದುಹೋಗುವಂತಿರಬೇಕು. 6.0- 7.0 ರಸಸಾರವಿದ್ದರೆ ಉತ್ತಮ. ಪಾಲಕ್‌ಗೆ ರೋಗಗಳ ಹಾವಳಿ ಕಡಿಮೆ. ಕೆಲವು ಬಾರಿ ಎಲೆಚುಕ್ಕೆ ರೋಗ ಬರಬಹುದು.

ಮಣ್ಣು ಹೇಗಿರಬೇಕು ?

ಯಾವುದೇ ಒಂದು ಬೆಳೆಯನ್ನು ಬೆಳೆಯಬೇಕು ಅಂದರೆ ಪ್ರಮುಖವಾಗಿ ಮಣ್ಣು ಹೇಗಿದೆ ಅನ್ನುವುದನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ನಿಮ್ಮ ಮಣ್ಣಿಗೆ ಯಾವ ಬೆಳೆ ಕೃಷಿ ಮಾಡಿದರೆ ಇಳುವರಿ ಚೆನ್ನಾಗಿ ಬರುತ್ತದೆ ಅನ್ನುವುದನ್ನು ತಿಳಿದುಕೊಂಡು ಕೃಷಿ ಮಾಡಿದರೆ ಉತ್ತಮ.

ಈ ಬೆಳೆಯನ್ನು ನೀರು ಬಸಿದು ಹೋಗುವಂತಹ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನು ಹೊಂದಿರುವಂತಹ ಎಲ್ಲಾ ತರಹದ ಫಲವತ್ತಾದ ಮಣ್ಣುಗಳಲ್ಲಿ ಬೆಳೆಯಬಹುದು .

ಯಾವ ಕಾಲದಲ್ಲಿ ಬಿತ್ತನೆ ಮಾಡಬೇಕು?

ಮಣ್ಣು ಪರೀಕ್ಷೆ ಮಾಡಿಸಿದ ಮೇಲೆ ನೀವು ಯಾವ ಸಮಯದಲ್ಲಿ ಬಿತ್ತನೆ ಮಾಡಬೇಕು ಅನ್ನುವುದನ್ನು ತಿಳಿದುಕೊಂಡು ಸೂಕ್ತವಾದ ಕಾಲದಲ್ಲಿ ಬಿತ್ತನೆ ಕಾರ್ಯ ನಿಗದಿ ಮಾಡ ಬಹುದಾಗಿದ್ದು, ಸೆಪ್ಟೆಂಬರ್‌ನಿಂದ ನವೆಂಬರ್ ತಿಂಗಳುಗಳು ಪಾಲಕ್ ಬೆಳೆಯನ್ನು ಬೆಳೆಯಲು ಸೂಕ್ತವಾದ ಕಾಲ.

ತಳಿಗಳು

ಪಾಲಕ್ ಸೊಪ್ಪಿನಲ್ಲಿ ಸಾಕಷ್ಟು ತಳಿಗಳನ್ನು ನೀವು ನೋಡಬಹುದು. ಅದರಂತೆ ಈ ಕೆಳಗೆ ಕೆಲವು ತಳಿಗಳ ಕುರಿತು ಮಾಹಿತಿಯನ್ನು ತಿಳಿಸಿದ್ದೇವೆ. ನೀವು ಅವುಗಳನ್ನು ನೋಡಬಹುದು, ನಿಮ್ಮ ಮಣ್ಣಿಗೆ ಹಾಗೆ ನಿಮ್ಮ ವಾತಾವರಣಕ್ಕೆ ಯಾವ ತಳಿ ಸೂಕ್ತವೆಂದು ತಿಳಿದುಕೊಂಡು ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು .

  1. ಪೂಸಾ ಜ್ಯೋತಿ :

ಇದು ದೊಡ್ಡ ಗಾತ್ರದ ದಪ್ಪವಾದ ಎಳೆಯ ರಸಭರಿತ ಎಲೆಗಳನ್ನು ಬಿಡುವ ತಳಿ . ಇದು ಹೆಕ್ಟೇರಿಗೆ 49 ಟನ್ ಎಲೆಯ ಇಳುವರಿಯನ್ನು 6-8 ಕಟಾವುಗಳಲ್ಲಿ ಕೊಡಬಲ್ಲದು.

  1. ಆಲ್ ಗ್ರೀನ್ :

ಇದು ಒಂದೇ ತರಹದ ಹಚ್ಚ ಹಸಿರಿನ ಮೃದು ಎಲೆಗಳನ್ನು ಬಿಡುತ್ತದೆ . ಇದರ ಎಲೆಗಳನ್ನು 15-20 ದಿವಸಗಳ ಅಂತರದಲ್ಲಿ 6-7 ಸಲ ಕಟಾವು ಮಾಡಬಹುದು. ಒಟ್ಟು ಪ್ರತಿ ಹೆಕ್ಟೇರಿಗೆ 125 ಟನ್ ಇಳುವರಿಯನ್ನು ಕೊಡಬಲ್ಲದು.

3 ಅರ್ಕಾ ಅನುಪಮ :

ಇದು ಮಧ್ಯಮ ಗಾತ್ರದ ಹಾಗೂ ದಪ್ಪದ ಎಲೆಗಳನ್ನು ಬಿಡುತ್ತದೆ. ಇದು ಪ್ರತಿ ಹೆಕ್ಟೇರಿಗೆ 40 ಟನ್‌ ಎಲೆಯ ಇಳುವರಿಯನ್ನು 4 ಕಟಾವುಗಳಲ್ಲಿ 90 ದಿವಸದ ಅವಧಿಯಲ್ಲಿ ಕೊಡಬಲ್ಲದು.

ಬೀಜಗಳು ಎಲ್ಲಿ ಸಿಗುತ್ತದೆ?

ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಿ ವಿಚಾರಿಸಬಹುದು, ಹಾಗೆಯೇ ನಿಮ್ಮ ಹತ್ತಿರದ ಸೀಡ್ಸ್ ಅಂಗಡಿ ಯಾವುದಾದರು ಇದ್ದರೆ ನೀವು ಅಲ್ಲಿ ಖರೀದಿ ಮಾಡಬಹುದು.

ಪಾಲಕ್ ಬೀಜ ಬಿತ್ತನೆ ವಿಧಾನ :

  • ಭೂಮಿಯನ್ನು ಹದ ಮಾಡಿದ ನಂತರ 2-3 ಮೀ . X 1-2 ಮೀ. ಉದ್ದಗಲದ ಸಸಿ ಮಡಿಗಳನ್ನು ತಯಾರಿಸಬೇಕು.
  • ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ ಹಾಗೂ ರಸಗೊಬ್ಬರಗಳನ್ನು ಮಡಿಗೆ ಕೊಟ್ಟು ಚೆನ್ನಾಗಿ ಬೆರೆಸಬೇಕು.
  • ನಂತರ ಬೀಜಗಳನ್ನು 10 ಸೆಂ . ಮೀ . ಸಾಲುಗಳಲ್ಲಿ ಬಿತ್ತಬೇಕು.
  • ಬೀಜಗಳು ಮೊಳಕೆ ಒಡೆಯುವತನಕ ತುಂತುರು ಜಾಡಿಯ ಮೂಲಕ ನೀರು ಹಾಕಬೇಕು.
  • ನೀರಾವರಿ ಮತ್ತು ಅಂತರ ಬೇಸಾಯ ಹೀಗಿರಲಿ
  • ಬೀಜಗಳು ಮೊಳಕೆಯೊಡೆದ ನಂತರ 4-5 ದಿವಸಗಳಿಗೊಮ್ಮೆ ನೀರು ಹಾಯಿಸಬೇಕು.
  • ಮಡಿಗಳಲ್ಲಿ ಕಳೆಗಳು ಬೆಳೆಯದಂತೆ ಕಾಳಜಿ ವಹಿಸಬೇಕು.

ಪಾಲಕ್ ಸೊಪ್ಪುನ ಕೊಯ್ಲು ಮತ್ತು ಇಳುವರಿ ಹೇಗೆ?

ಬಿತ್ತಿದ 30-40 ದಿವಸಗಳಲ್ಲಿ ಬೆಳೆ ಮೊದಲು ಕಟಾವಿಗೆ ಬರುತ್ತದೆ. 3 ತಿಂಗಳ ಅಂತರದಲ್ಲಿ ಮೂರು ಬಾರಿ ಕಟಾವು ಮಾಡಬಹುದು. ಪ್ರತಿ ಹೆಕ್ಟೇರಿಗೆ 10-15 ಟನ್ ಸೊಪ್ಪಿನ ಇಳುವರಿ ಪಡೆಯಬಹುದು.

Related post

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ ಲಾಭ ಗಳಿಸಬಹುದು – ಟಾಪ್ 10 ಉದ್ಯಮಗಳ ಮಾಹಿತಿ ಇಲ್ಲಿವೆ ನೋಡಿ…

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ…

ನ್ಯೂಸ್ ಆ್ಯರೋ : ಯಾವುದೇ ಲಾಭದಾಯಕ ವ್ಯವಹಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಬಹುದು. ಆದರೆ ವ್ಯಾಪಾರ ಕೈಹಿಡಿಯುವುದು ತುಂಬಾನೇ ಕಷ್ಟ.…
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ…

ನ್ಯೂಸ್ ಆ್ಯರೋ‌ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ…

Leave a Reply

Your email address will not be published. Required fields are marked *