- ಕೃಷಿ ಉದ್ಯಮಕೃಷಿ ವಿಜ್ಞಾನಕೃಷಿ ಸುದ್ದಿ
- January 12, 2022
- No Comment
- 987
ಬೆಳ್ತಂಗಡಿ : ಜೇನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಯೋಜನಗೆಳ ಬಗ್ಗೆ ಮಾಹಿತಿ ಕಾರ್ಯಕ್ರಮ – ಜೇನುಕೃಷಿ ಹಾಗೂ ಅಣಬೆ ಕೃಷಿಯ ಬಗ್ಗೆ ತಜ್ಞರಿಂದ ತರಬೇತಿ

ಕೃಷಿ ಲೋಕ : ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಬೆಳ್ತಂಗಡಿ, ಗ್ರಾಮ ಪಂಚಾಯತ್ ಬಂದಾರು ಮತ್ತು ಸಿದ್ಧಿವಿನಾಯಕ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಬಂದಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾರತ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ 2021-2022ನೇ ಸಾಲಿನ ಜಿಲ್ಲಾ ವಲಯ ಜೇನು ಅಭಿವೃದ್ಧಿ ಯೋಜನೆಯಡಿ 2 ದಿನಗಳ ಜೇನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ.ಗೌಡ ಮತ್ತು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿ ಅವರು ದ್ವೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜೇನುಕೃಷಿ ತರಬೇತಿಯನ್ನು ಶ್ರೀಯುತ ಶಾಮ್ ಭಟ್ ಪ್ರಗತಿಪರ ಕೃಷಿಕರು ಉರುವಾಲು ಇವರು ನಡೆಸಿಕೊಟ್ಟರು ಮತ್ತು ಅಣಬೆ ಕೃಷಿಯ ಮಾಹಿತಿಯನ್ನು ಶ್ರೀಯುತ ಪ್ರಭಾಕರ ಮಯ್ಯ ಪ್ರಗತಿಪರ ಕೃಷಿಕರು ಇವರು ನೀಡಿದರು, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ಶ್ರೀಮತಿ ಉಷಾ ಕಾಮತ್ ಅಮೂಲ್ಯ ಸಾಕ್ಷರತಾ ಕೇಂದ್ರ ಇವರು ನೀಡಿದರು.

ಈ ತರಬೇತಿ ಕಾರ್ಯಗಾರದಲ್ಲಿ ತೋಟಗಾರಿಕಾ ಅಧಿಕಾರಿ ಮಲ್ಲಿನಾಥ್ , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ , ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಂಗಾಧರ್ , ಗ್ರಾಮ ಪಂಚಾಯತ್’ನ ಸರ್ವ ಸದಸ್ಯರು , ಸ್ವಸಹಾಯ ಸಂಘದ ಸದಸ್ಯೆಯರು , ಗ್ರಾಮಸ್ಥರು ಹಾಗೂ ಸಂಜೀವಿನಿ ಒಕ್ಕೂಟದ ಎಂಬಿಕೆ ಮತ್ತು ಎಲ್ ಸಿ ಆರ್ ಪಿ ಗಳು ಉಪಸ್ಥಿತರಿದ್ದರು