ಬಾತುಕೋಳಿ ಸಾಕಾಣಿಕೆಯಲ್ಲಿದೆ ಹೆಚ್ಚಿನ ಲಾಭ – ಸರ್ಕಾರದಿಂದಲೇ ಸಿಗುತ್ತೆ ಸಾಲ, 35% ಸಹಾಯಧನವೂ ಲಭ್ಯ…!!

ಬಾತುಕೋಳಿ ಸಾಕಾಣಿಕೆಯಲ್ಲಿದೆ ಹೆಚ್ಚಿನ ಲಾಭ – ಸರ್ಕಾರದಿಂದಲೇ ಸಿಗುತ್ತೆ ಸಾಲ, 35% ಸಹಾಯಧನವೂ ಲಭ್ಯ…!!

ನ್ಯೂಸ್ ಆ್ಯರೋ‌ : ನಮ್ಮ ದೇಶ ಕೃಷಿ ಆಧಾರಿತ ದೇಶ. ಇಲ್ಲಿ ಶೇ.60ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿ ಬದುಕುತ್ತಾರೆ. ಬಹುತೇಕ ಕುಟುಂಬಗಳು ಕೃಷಿಕರು. ಒಂದಾನೊಂದು ಕಾಲದಲ್ಲಿ ಬದುಕಲಾರದವನು ಕೃಷಿ ಮಾಡಿದವನು ಎಂಬ ಮಾತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಕಂಪ್ಯೂಟರ್‌ ಗಳ ಮುಂದೆ ಕುಳಿತೇ ಸಾಫ್ಟ್‌ವೇರ್ ಉದ್ಯೋಗ ಮಾಡುವವರೂ ಕೃಷಿಯತ್ತ ಹೋಗುತ್ತಿದ್ದಾರೆ. ವಿವಿಧ ಬೆಳೆಗಳನ್ನು ಬೆಳೆದು ಲಕ್ಷ ಕೋಟಿ ಗಳಿಸುತ್ತಿದ್ದಾರೆ. ರೈತರಿಗೆ ಅಪಾರ ಆದಾಯ ತರುವ ಅನೇಕ ಬೆಳೆಗಳಿವೆ. ಕೃಷಿಯ ಜೊತೆ ಜೊತೆಗೆ ಭಾರತದಲ್ಲಿ ರೈತರು ಪಶುಸಂಗೋಪನೆಯ ಮೂಲಕ ತಮ್ಮ ಜೀವನವನ್ನು ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ರೈತರು ಹಸು, ಎಮ್ಮೆ, ಆಡು, ಕೋಳಿ, ಬಾತುಕೋಳಿ ಸಾಕಣೆ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ.

ಬಾತುಕೋಳಿ ಸಾಕಾಣಿಕೆಯಲ್ಲಿದೆ ಹೆಚ್ಚಿನ ಲಾಭ!

ಕಳೆದ ಕೆಲವು ವರ್ಷಗಳಿಂದ ರೈತರು ಬಾತುಕೋಳಿ ಸಾಕಾಣಿಕೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ವಾಸ್ತವವಾಗಿ, ಕೋಳಿ ಸಾಕಣೆಗೆ ಹೋಲಿಸಿದರೆ , ಬಾತುಕೋಳಿ ಸಾಕಣೆ ಕಡಿಮೆ ವೆಚ್ಚದೊಂದಿಗೆ ಹೆಚ್ಚು ಲಾಭದಾಯಕ ವ್ಯವಹಾರವಾಗಿದೆ. ಬಾತುಕೋಳಿ ಮೊಟ್ಟೆ ಮತ್ತು ಮಾಂಸ ಎರಡರಲ್ಲೂ ಹೆಚ್ಚಿನ ಪ್ರೋಟೀನ್ ಇರುತ್ತದೆ. ಮಾರುಕಟ್ಟೆಯಲ್ಲಿ ಇದರ ಬೇಡಿಕೆಯೂ ಹೆಚ್ಚುತ್ತಿದೆ. ಬೇಡಿಕೆಯೊಂದಿಗೆ ಇದರ ಬೆಲೆಯೂ ಹೆಚ್ಚುತ್ತಿದ್ದು, ಇದರಿಂದ ರೈತರ ಆದಾಯವೂ ಗಣನೀಯವಾಗಿ ಹೆಚ್ಚುತ್ತಿದೆ. ಹೀಗಾಗಿ ಬಾತುಕೊಳಿ ಸಾಕಾಣಿಕೆ ವ್ಯಾಪಾರವನ್ನು ನೀವು ಆರಂಭಿಸಿದರೆ, ನೀವೂ ಹೆಚ್ಚಿನ ಆದಾಯವನ್ನು ಗಳಿಸಬಹುದು.

ಕೊಳದ ಸುತ್ತಮುತ್ತ ಬಾತುಕೋಳಿ ಸಾಕಾಣಿಕೆ ಆರಂಭಿಸಿ!

ಬಾತುಕೋಳಿ ಸಾಕಣೆಯನ್ನು ಪ್ರಾರಂಭಿಸಲು ಶಾಂತವಾದ ಸ್ಥಳವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಕೊಳದ ಸುತ್ತಲಿನ ಪರಿಸ್ಥಿತಿಯು ಇದಕ್ಕೆ ತುಂಬಾ ಸೂಕ್ತವಾಗಿದೆ ಎಂದು ಹೇಳಲಾಗುತ್ತದೆ. ಬಾತುಕೋಳಿ ಸಾಕಣೆ ಪ್ರದೇಶದಲ್ಲಿ ಯಾವುದೇ ಕೊಳವಿಲ್ಲದಿದ್ದರೆ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಕೊಳವನ್ನು ಸಿದ್ಧಪಡಿಸಬಹುದು. ನೀವು ಕೊಳವನ್ನು ನಿರ್ಮಿಸಲು ಬಯಸದಿದ್ದರೆ, ನೀವು ಟಿನ್ಶೆಡ್ ಸುತ್ತಲೂ ಎರಡರಿಂದ ಮೂರು ಅಡಿ ಆಳ ಮತ್ತು ಅಗಲವಾದ ಚಾನಲ್ ಅನ್ನು ರಚಿಸಬಹುದು, ಅದರಲ್ಲಿ ಬಾತುಕೋಳಿಗಳು ಈಜಬಹುದು ಮತ್ತು ಬೆಳೆಯಬಹುದು.

ಬಾತುಕೋಳಿ ಸಾಕಾಣಿಕೆ ಹೇಗೆ?

ಬಾತುಕೋಳಿ ಸಾಕಾಣಿಕೆಗೆ ಮೇವು ಪ್ರಮುಖ ಸಮಸ್ಯೆಯಲ್ಲ. ಜಲವಾಸಿ ಕೀಟಗಳು, ಸಣ್ಣ ಮೀನುಗಳು, ಕಪ್ಪೆಗಳು ಇತ್ಯಾದಿಗಳನ್ನು ಬಾತುಕೋಳಿಗಳಿಗೆ ಆಹಾರವಾಗಿ ಸೇವಿಸುತ್ತವೆ. ಹೀಗಾಗಿ ಇದಕ್ಕೆ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕೆಂದಿಲ್ಲ. ಹಾಗೇ ಬಾತುಕೋಳಿಗಳ ಸಾಕಾಣಿಕೆ ಮಾಡುವವರಿಗೆ ಕೋಳಿ ಸಾಕಾಣಿಕೆ ಮಾಡುವವರಿಗೆ ಹೋಲಿಸಿದರೆ ತುಂಬಾ ಕಡಿಮೆ ಕೆಲಸ. ಅವುಗಳ ನಿರ್ವಹಣೆಯಲ್ಲಿ ಸಾಕಷ್ಟು ಸಮಯ ಉಳಿತಾಯ ಆಗುತ್ತದೆ. ಬಾತುಕೋಳಿಗಳಿಗೆ ಒಂದು ದೊಡ್ಡ ಟಬ್ ನಲ್ಲಿ ನೀರು ತುಂಬಿ ಇಟ್ಟರೆ ಆರಾಮವಾಗಿ ಈಜಿಕೊಂಡು ಕಾಲ ಕಳೆಯುತ್ತವೆ.

ಇನ್ನೂ ಡಕ್ ಪೌಲ್ಟ್ರಿ ಫಾರ್ಮ್ ತೆರೆಯಲು ಸರ್ಕಾರವು ಶೇ.25 ಸಹಾಯಧನವನ್ನು ನೀಡುತ್ತದೆ . ಇದರೊಂದಿಗೆ ಎಸ್.ಸಿ ಮತ್ತು ಎಸ್ಟಿ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಸಹಾಯಧನದ ಮೊತ್ತವನ್ನು ಶೇಕಡಾ 35 ಕ್ಕೆ ನಿಗದಿಪಡಿಸಲಾಗಿದೆ. ಇದಲ್ಲದೇ ಸಾಲ ಕೂಡ ನೀಡಲಾಗುತ್ತಿದ್ದು, ಇದಲ್ಲದೇ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ (MUDRA) ಎಸ್‌ಬಿಐ ಬಾತುಕೋಳಿ ಸಾಕಾಣಿಕೆಗೆ ಸಾಲ ನೀಡಲಾಗುತ್ತದೆ. ಕೋಳಿ ಸಾಕಣೆಗೆ ಹೋಲಿಸಿದರೆ ಬಾತುಕೋಳಿ ಸಾಕಣೆಯು ಹೆಚ್ಚು ಆರ್ಥಿಕ ಮತ್ತು ಲಾಭದಾಯಕವಾಗಿದೆ.

Related post

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ ಲಾಭ ಗಳಿಸಬಹುದು – ಟಾಪ್ 10 ಉದ್ಯಮಗಳ ಮಾಹಿತಿ ಇಲ್ಲಿವೆ ನೋಡಿ…

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ…

ನ್ಯೂಸ್ ಆ್ಯರೋ : ಯಾವುದೇ ಲಾಭದಾಯಕ ವ್ಯವಹಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಬಹುದು. ಆದರೆ ವ್ಯಾಪಾರ ಕೈಹಿಡಿಯುವುದು ತುಂಬಾನೇ ಕಷ್ಟ.…
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ…

ನ್ಯೂಸ್ ಆ್ಯರೋ‌ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ…

Leave a Reply

Your email address will not be published. Required fields are marked *