- ಸರ್ಕಾರಿ ಯೋಜನೆಗಳು
- July 20, 2023
- No Comment
- 5229
ಅಡಿಕೆ, ಕಾಳು ಮೆಣಸು ಬೆಳೆಗಾರರಿಗೆ ಗುಡ್ ನ್ಯೂಸ್ – ಕೊನೆಗೂ ಬೆಳೆ ವಿಮೆಯ ಕೊಡುಗೆ ಪ್ರಕಟ, ಲಾಸ್ಟ್ ಡೇಟ್ ಯಾವಾಗ?

ನ್ಯೂಸ್ ಆ್ಯರೋ : ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ರಾಜ್ಯ ಸರಕಾರ ಶುಭ ಸುದ್ದಿ ನೀಡಿದ್ದು, ಇವೆರಡನ್ನು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (WBCIS) ಗೆ ಸೇರಿಸಲು ಆದೇಶ ಹೊರಡಿಸಿದೆ.
ಬಹು ವರ್ಷಗಳ ಬೇಡಿಕೆ
ಈ ಕುರಿತು ಅನೇಕ ವರ್ಷಗಳಿಂದ ಆಗ್ರಹ ಕೇಳಿ ಬಂದಿತ್ತು. 2023-24ನೇ ಸಾಲಿನಲ್ಲಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಮತ್ತು ಕಾಳು ಮೆಣಸಿಗೆ ಬೆಳೆ ವಿಮೆ ಪಾವತಿಸಲು ದಕ್ಷಿಣ ಕನ್ನಡದ ಜಿಲ್ಲೆಯ ರೈತರಿಗೆ ಅವಕಾಶ ನೀಡಲಾಗಿದೆ.
ಪ್ರತಿ ವರ್ಷ ಹವಾಮಾನ ಆಧಾರಿತ ಫಸಲು ವಿಮಾ ಯೋಜನೆ ನೋಂದಣಿ ಜೂನ್ ನಲ್ಲೇ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಸರಕಾರ ಇಲ್ಲಿಯವರೆಗೆ ಈ ಕುರಿತು ಯಾವುದೇ ಆದೇಶ ಹೊರಡಿಸದೇ ಇದ್ದುದು ರೈತರ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸದನದಲ್ಲಿ ಪ್ರಸ್ತಾವ ಸಲ್ಲಿಸಿದ್ದರು. ಹೀಗಾಗಿ ಸರಕಾರ ಕೊನೆಗೂ ಈ ಬಗ್ಗೆ ಆದೇಶ ಹೊರಡಿಸಿದೆ.
ಕೊನೆಯ ದಿನಾಂಕ ಯಾವಾಗ?
ಜುಲೈ 31ರ ವರೆಗೆ ಬೆಳೆ ವಿಮೆ ಯೋಜನೆಯ ಪ್ರೀಮಿಯಂ ಪಾವತಿಸಬಹುದು. ಅಡಿಕೆ ಬೆಳೆಗಾರರು 6,400 ರೂ. ಮತ್ತು ಕಾಳು ಮೆಣಸು ಬೆಳೆಗಾರರು 2,350 ರೂ. ಪಾವತಿಸಬೇಕು.