- ಸರ್ಕಾರಿ ಯೋಜನೆಗಳುಪ್ರಮುಖ ಸುದ್ದಿ
- January 4, 2022
- No Comment
- 691
ಕೃಷಿ ಉದ್ದೇಶಗಳಿಗಾಗಿ ಮೂರು ಲಕ್ಷದವರೆಗೂ ಕಿಸಾನ್ ಕ್ರೆಡಿಟ್ ಕಾರ್ಡ್ ನಲ್ಲಿ ಸಾಲ ಪಡೆಯಬಹುದು – ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು, ಬಡ್ಡಿ ದರ ತಿಳಿಯಲು ಮಾಹಿತಿ ಇಲ್ಲಿದೆ…

ಕೃಷಿ ಲೋಕ : ಭಾರತದ ಅತೀ ಹೆಚ್ಚು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ʼನ ಬಗ್ಗೆ ಮಾಹಿತಿ ಇಲ್ಲವೆಂದೇ ಹೇಳಬಹುದು. ಇದೇ ಕಿಸಾನ್ ಕಾರ್ಡ್ ಬಳಸಿ ರೈತರು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸುಲಭವಾಗಿ ಸಾಲ ಪಡೆಯಬಹುದಾಗಿದೆ. ಕಿಸಾನ್ ಕಾರ್ಡ್ ನ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತಿದ್ದೇವೆ.
ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಿ 5 ವರ್ಷಗಳಲ್ಲಿ 3 ಲಕ್ಷ ರೂ.ಗಳವರೆಗಿನ ಸಾಲ ಪಡೆಯಬಹುದು. ವಾಸ್ತವವಾಗಿ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಯನ್ನು ದೇಶದ ಬಹುತೇಕ ಎಲ್ಲಾ ಬ್ಯಾಂಕುಗಳಲ್ಲಿ ಪಡೆಯಬಹುದು.
ಕಿಸಾನ್ ಕಾರ್ಡ್ ಪಡೆಯುವುದು ಹೇಗೆ?
ಕಿಸಾನ್ ಕಾರ್ಡ್ ಪಡೆಯಲು ರೈತರು ಬ್ಯಾಂಕ್ ಖಾತೆ ತೆರೆಯಬೇಕು ಮತ್ತು ಅದೇ ಆಧಾರದ ಮೇಲೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.
ರೈತರು ಖರೀದಿಸಬೇಕಾದ ಯಾವುದೇ ವಸ್ತುವನ್ನು ಗೊಬ್ಬರ, ಬೀಜಗಳು ಅಥವಾ ಕೀಟನಾಶಕಗಳು ಈ ಸಾಲದ ಹಣದಿಂದ ಖರೀದಿಸಬಹುದು. ಕೃಷಿ ಉದ್ದೇಶಕ್ಕಾಗಿ ರೈತರು ಇತರರ ಬಳಿ ಸಾಲ ಪಡೆಯಬಾರದು ಎಂಬ ಏಕಮಾತ್ರ ಉದ್ದೇಶದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಪರಿಚಯಿಸಲಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿ ದರ ಹೇಗೆ?
- ಎಸ್ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ (SBI Kisan Credit Card) : ಆರಂಭದಲ್ಲಿ ವಾರ್ಷಿಕ ಕನಿಷ್ಠ ಶೇ.7ರಷ್ಟು. ವಾರ್ಷಿಕ ಶೇ.2ರಷ್ಟು ಬಡ್ಡಿದರ
- ಪಿಎನ್‌ಬಿ ಕಿಸಾನ್ ಕ್ರೆಡಿಟ್ ಕಾರ್ಡ್ (PNB Kisan Credit Card) : ಕನಿಷ್ಠ. ವಾರ್ಷಿಕ ಶೇ. 4ರಷ್ಟು ಬಡ್ಡಿದರ
- ಎಚ್‌ಡಿಎಫ್‌ಸಿ ಬ್ಯಾಂಕ್ ಕಿಸಾನ್ ಕ್ರೆಡಿಟ್ ಕಾರ್ಡ್(HDFC Bank Kisan Credit Card) : ಗರಿಷ್ಠ ವಾರ್ಷಿಕ 16.69%ಕನಿಷ್ಠ. ವಾರ್ಷಿಕ ಶೇ. 9ರಷ್ಟು ಬಡ್ಡಿದರ
- ಆ್ಯಕ್ಸಿಸ್ ಬ್ಯಾಂಕ್ ಕಿಸಾನ್ ಕ್ರೆಡಿಟ್ ಕಾರ್ಡ್( Axis Bank Kisan Credit Card) : 8.85%, ಬಡ್ಡಿ
- ಮಹಾಬ್ಯಾಂಕ್ ಕಿಸಾನ್ ಕ್ರೆಡಿಟ್ ಕಾರ್ಡ್ (Maha Bank Kisan Credit Card) : ಕನಿಷ್ಠ. 7%
- ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಕಿಸಾನ್ ಕ್ರೆಡಿಟ್ ಕಾರ್ಡ್(Indian Overseas Bank Kisan Credit Card) : 7%
- ಯುಕೋ ಬ್ಯಾಂಕ್ (UCO Bank KCC): 7% ಬಡ್ಡಿ
ಕೃಷಿಕರು ಕಿಸಾನ್ ಕ್ರೆಡಿಟ್ ಕಾರ್ಡ್ ನ ಸದುಪಯೋಗ ಪಡೆದುಕೊಂಡು ಕೃಷಿ ಕಾರ್ಯಗಳಲ್ಲಿ ಯಶಸ್ವಿಯಾಗಲು ಇದು ಸಹಕಾರಿಯಾಗಲಿದೆ.
ಮಾಹಿತಿ ಇಷ್ಟವಾದರೆ ಈ ಮಾಹಿತಿಯನ್ನು ಇತರರಿಗೂ ಶೇರ್ ಮಾಡಲು ಮರೆಯದಿರಿ.