ರೇಷ್ಮೆ ಕೃಷಿ ಮಾಡಿ ಅಪಾರ ಹಣಗಳಿಸಬಹುದು – ಸರ್ಕಾರದಿಂದಲೇ ಸಿಗುತ್ತೆ ಹಲವು ಯೋಜನೆಗಳ ಮೂಲಕ ಲಕ್ಷಾಂತರ ರೂಪಾಯಿ ಸಹಾಯಧನ : ವಿವರಗಳಿಗಾಗಿ ಈ ವರದಿ ಓದಿ..

ರೇಷ್ಮೆ ಕೃಷಿ ಮಾಡಿ ಅಪಾರ ಹಣಗಳಿಸಬಹುದು – ಸರ್ಕಾರದಿಂದಲೇ ಸಿಗುತ್ತೆ ಹಲವು ಯೋಜನೆಗಳ ಮೂಲಕ ಲಕ್ಷಾಂತರ ರೂಪಾಯಿ ಸಹಾಯಧನ : ವಿವರಗಳಿಗಾಗಿ ಈ ವರದಿ ಓದಿ..

ಕೃಷಿ ಲೋಕ : ರೇಷ್ಮೆ ಕೃಷಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಲವಾರು ಸುಧಾರಿತ ಕ್ರಮಗಳನ್ನು ರೇಷ್ಮೆ ಇಲಾಖೆ ಕೈಗೊಂಡಿದೆ. ರೇಷ್ಮೆ ಕೃಷಿ ವಿಸ್ತರಿಸಲು ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರು ಇದನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು.

ಸರಕಾರ ರೇಷ್ಮೆ ಗಿಡಗಳನ್ನು ಸುಲಭ ಬೆಲೆಗೆ ದೊರೆಯುವಂತೆ ಮಾಡುವುದರಿಂದ ಹಿಡಿದು ಹುಳು ಸಾಕಣೆ ಮನೆಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ವಿತರಿಸುವ ತನಕ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಸಹಾಯಧನವನ್ನು ನೇರವಾಗಿ ರೇಷ್ಮೆ ಬೆಳೆಗಾರರಿಗೆ ಜಮೆ ಮಾಡುವ ಕಾರ್ಯವನ್ನು ಮಾಡುತ್ತಿದೆ.

ಏನೆಲ್ಲಾ ಸೌಲಭ್ಯಗಳು ಸಿಗಲಿದೆ ?

  1. ಹಿಪ್ಪುನೇರಳೆ ನಾಟಿ ಪ್ರೋತ್ಸಾಹ: ಪ.ಜಾತಿ/ ಪ.ಪಂಗಡದವರಿಗೆ ಎಕರೆಗೆ ರೂ.5500, ಇತರೆ ವರ್ಗದವರಿಗೆ ಎಕರೆಗೆ 4125 ರೂ. ಸಹಾಯಧನ ನೀಡಲಾಗುತ್ತದೆ. ಗರಿಷ್ಠ 2 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಕೃಷಿಗೆ ಸಹಾಯಧನ ಪಡೆಯಬಹುದು.
  2. ಹನಿ ನೀರಾವರಿ ಸಹಾಯಧನ: ಪ.ಜಾತಿ/ಪ.ಪಂಗಡದವರಿಗೆ ಪ್ರತಿ ಎಕರೆಗೆ 18,000 ರೂ. ಇತರೆ ವರ್ಗದವರಿಗೆ 15,000 ರೂ. ಗರಿಷ್ಠ 2 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳ ಕೃಷಿಗೆ ಸಹಾಯಧನ ಪಡೆಯಬಹುದು.
  3. ಹುಳು ಸಾಕಾಣಿಕೆ ಮನೆ: 15 X25 ಅಳತೆಯ ಹುಳು ಸಾಕಾಣಿಕೆ ಮನೆ, 1/2 ಎಕರೆ ಹಿಪ್ಪುನೇರಳೆ ತೋಟಕ್ಕೆ 25,000 ರೂ. ಪರಿಹಾರಧನ ನೀಡಲಾಗುತ್ತದೆ. 20 X 30 ಅಳತೆ ಹುಳು ಸಾಕಾಣಿಕೆ ಮನೆ ಹಾಗೂ 1 ಎಕರೆ ಹಿಪ್ಪುನೇರಳೆ ತೋಟಕ್ಕೆ 50,000 ರೂ. ಸಹಾಯಧನ ನೀಡಲಾಗುತ್ತದೆ. 20 X 50 ಅಳತೆಯ ಹುಳು ಸಾಕಾಣಿಕೆ ಮನೆ ಹಾಗೂ 2 ಎಕರೆ ಹಿಪ್ಪುನೇರಳೆ ತೋಟಕ್ಕೆ 75,000 ರೂ. ಸಹಾಯಧನ ನೀಡಲಾಗುತ್ತದೆ. ಪ.ಜಾತಿ/ ಪ.ಪಂಗಡದವರಿಗೆ 90,000 ರೂ. ಹಾಗೂ ಆರ್.ಸಿ.ಸಿ. ಕಟ್ಟಡಕ್ಕೆ 1,23,000 ರೂ. ಸಹಾಯಧನ ನೀಡಲಾಗುತ್ತದೆ.
  4. ಚಂದ್ರಿಕೆ ಮನೆ ಸಹಾಯಧನ: ಮನೆ ಅಳತೆಯನ್ನು ಆಧರಿಸಿ ಪ.ಜಾತಿ/ಪ.ಪಂ ಇವರಿಗೆ ಕನಿಷ್ಠ 24,000 ರೂ., ಗರಿಷ್ಠ 75,000 ರೂ. ಹಾಗೂ ಇತರೆ ವರ್ಗದವರಿಗೆ ಕನಿಷ್ಠ 18,000 ರೂ. ಗರಿಷ್ಠ 50,000 ರೂ. ಸಹಾಯಧನ ನೀಡಲಾಗುತ್ತದೆ.
  5. ಉಪಕರಣಗಳ ಸಹಾಯಧನ: ಪ.ಜಾತಿ/ಪ.ಪಂ ಶೇ.75ರಷ್ಟು ಅಂದರೆ ಗರಿಷ್ಠ 30,000 ರೂ. ಸಹಾಯಧನ ನೀಡಲಾಗುತ್ತದೆ.

ಅರ್ಹತೆಗಳೇನು?

  • ಫಲಾನುಭವಿ ಹೊಸದಾಗಿ ಹಿಪ್ಪುನೇರಳೆ ನಾಟಿ ಮಾಡಿರಬೇಕು ಮತ್ತು ಸ್ವಂತ ಹಿಪ್ಪುನೇರಳೆ ಹೊಂದಿರಬೇಕು.
  • ಸವಲತ್ತು/ಸಹಾಯಧನ ಪಡೆಯಲು ಫಲಾನುಭವಿ ನಿಗಧಿತ ಅರ್ಜಿ ಸಲ್ಲಿಸಬೇಕು ಮತ್ತು ಈ ಚಟುವಟಿಕೆಗಳನ್ನು ಅಳವಡಿಸಿಕೊಂಡಿರಬೇಕು.
  • ಹುಳು ಸಾಕಾಣಿಕೆ ಮನೆಯನ್ನು ಇಲಾಖೆ ನಿಗಧಿಪಡಿಸಿದ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ನಿರ್ಮಿಸಿರಬೇಕು.
  • ಫಲಾನುಭವಿ ವಾರ್ಷಿಕ ಕನಿಷ್ಟ 2 ದ್ವಿತಳಿ ಬೆಳೆಗಳನ್ನು ಬೆಳೆಯಬೇಕು.
  • ಮೈಸೂರು ತಳಿ ಬಿತ್ತನೆ ಬೆಳೆಗಾರರು ಮತ್ತು ದ್ವಿತಳಿ ಬಿತ್ತನೆ ಬೆಳೆಗಾರರು ನಿಗಧಿಪಡಿಸಿದ ತಳಿಗಳನ್ನು ಸಾಕಣೆ ಮಾಡಬೇಕು.

ಈ ದಾಖಲೆಗಳು ಅಗತ್ಯ

  • ಹಿಪ್ಪುನೇರಳೆ ತೋಟದ ಪಹಣಿ, ಇ.ಸಿ. ವಂಶವೃಕ್ಷ, ಮುಚ್ಚಳಿಕೆ ಪತ್ರ ಅಳವಡಿಸಿಕೊಂಡಿರುವ ಚಟುವಟಿಕೆಯ ಛಾಯಾಚಿತ್ರ
  • ಹುಳು ಸಾಕುವ ಮನೆ ಅಂದಾಜು ಮತ್ತು ನಕ್ಷೆ ಸಂದರ್ಭಾನುಸಾರ ಅಗತ್ಯವಿರುವ ಇನ್ನಿತರೆ ಪೂರಕ್ ದಾಖಲೆಗಳು ಮತ್ತು ಬಿಲ್ ಗಳು
  • ಹನಿ ನೀರಾವರಿ ಮತ್ತು ಉಪಕರಣಗಳನ್ನು ಸರ್ಕಾರದಿಂದ ಅಂಗೀಕೃತ ಸಂಸ್ಥೆಗಳಿಂದ ಮಾತ್ರ ಅಳವಡಿಸಿಕೊಂಡಿರಬೇಕು/ಖರೀದಿಸಿರಬೇಕು.
    ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪ್ರಸ್ತಾವನೆಗೆ ಮಹಜರು ಲಗತ್ತಿಸಿರಬೇಕು.

Related post

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ ಲಾಭ ಗಳಿಸಬಹುದು – ಟಾಪ್ 10 ಉದ್ಯಮಗಳ ಮಾಹಿತಿ ಇಲ್ಲಿವೆ ನೋಡಿ…

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ…

ನ್ಯೂಸ್ ಆ್ಯರೋ : ಯಾವುದೇ ಲಾಭದಾಯಕ ವ್ಯವಹಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಬಹುದು. ಆದರೆ ವ್ಯಾಪಾರ ಕೈಹಿಡಿಯುವುದು ತುಂಬಾನೇ ಕಷ್ಟ.…
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ…

ನ್ಯೂಸ್ ಆ್ಯರೋ‌ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ…

Leave a Reply

Your email address will not be published. Required fields are marked *