- ಸರ್ಕಾರಿ ಯೋಜನೆಗಳು
- February 7, 2023
- No Comment
- 2058
ನೀವು ಟ್ರಾಕ್ಟರ್ ಖರೀದಿಸಿದ್ರೆ, ಅರ್ಧ ಹಣ ಸರ್ಕಾರವೇ ಪಾವತಿಸುತ್ತೆ – ಯಾರೆಲ್ಲ ಈ ಯೋಜನೆಗೆ ಅರ್ಹರು, ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಕೃಷಿ ಲೋಕ : ದೇಶದ ವಿವಿಧ ರಾಜ್ಯಗಳು ಚುನಾವಣೆಯ ಹೊಸ್ತಿಲಲ್ಲಿರುವಾಗ, ಮತದಾರರಿಗೆ ಭರಪೂರ ಯೋಜನೆಗಳ ಘೋಷಣೆಗಳಾಗುತ್ತಿವೆ. ಅದರ ಮುಂದಿನ ಭಾಗವಾಗಿ ಇದೀಗ, ರೈತರಿಗೆ ಕೇಂದ್ರ ಸರ್ಕಾರ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಪಿ.ಎಂ ಕಿಸಾನ್ ಯೋಜನೆಯಡಿ ಟ್ರಾಕ್ಟರ್ ಗಳನ್ನು ಸಬ್ಸಿಡಿ ದರದಲ್ಲಿ ನೀಡಲು ಮುಂದಾಗಿದೆ. ರೈತರು 50% ಸಬ್ಸಿಡಿಯಲ್ಲಿ ಟ್ರಾಕ್ಟರ್ ಖರೀದಿಸಬಹುದಾಗಿದೆ. ದೇಶದ ಎಲ್ಲಾ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಬಯಸುವ ರೈತರು ರಾಜ್ಯ ಮಟ್ಟದ ಅಧಿಕಾರಿಗಳ ಮೂಲಕ ಆನ್ಲೈನ್ ಹಾಗೂ ಆಪ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಯೋಜನೆ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಮೀಸಲಾಗಿದ್ದು, ಇದೊಂದು ರಾಷ್ಟ್ರೀಯ ಯೋಜನೆಯಾಗಿದೆ. ಆ ಕಾರಣ ವಿವಿಧ ರಾಜ್ಯ ಸರ್ಕಾರಗಳು ರೈತರಿಗೆ ಸಬ್ಸಿಡಿಯಲ್ಲಿ ಟ್ರಾಕ್ಟರ್ ವಿತರಿಸುವ ಜವಾಬ್ದಾರಿಗಳನ್ನು ಹೊಂದಿದೆ. ಈ ಯೋಜನೆಯಡಿ ಒಂದು ಮನೆಯ ಒಬ್ಬ ಸದಸ್ಯ ಮಾತ್ರ ಅರ್ಜಿ ಸಲ್ಲಿಸಲು ಅರ್ಹನಾಗಿರುತ್ತಾನೆ. ಮಹಿಳಾ ರೈತರಿಗೆ ಸಬ್ಸಿಡಿ ದರದಲ್ಲಿ ಟ್ರಾಕ್ಟರ್ ಮಾತ್ರವಲ್ಲದೆ ಅದರೊಂದಿಗೆ ಇತರೆ ಸೌಲಭ್ಯಗಳು ದೊರೆಯಲಿದೆ.
ಯೋಜನೆ ಪಡೆಯಲು ಬೇಕಾದ ಮಾನದಂಡಗಳು
ಕೇಂದ್ರ ಸರ್ಕಾರವು ಈ ಯೋಜನೆಯನ್ನು ಪಡೆಯಲು ರೈತರಿಗೆ ಕೆಲವು ಮಾನದಂಡಗಳನ್ನು ವಿಧಿಸಿದ್ದು ಅವುಗಳು ಇಂತಿದೆ.
- 1.ಅರ್ಜಿದಾರ ರೈತ ಭಾರತದ ಖಾಯಂ ನಿವಾಸಿಯಾಗಿರಬೇಕು.
- 2.ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 60 ವರ್ಷಕ್ಕಿಂತ ಕಡಿಮೆ ಇರಬೇಕು.
- 3.ಕುಟುಂಬದ ಆದಾಯ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
- ಇತರ – ಸಣ್ಣ / ಅತಿಸಣ್ಣ ರೈತರ ಮಾನದಂಡಗಳ ಅಡಿಯಲ್ಲಿ ಇರಬೇಕು.
- 5.ಟ್ರ್ಯಾಕ್ಟರ್ ಖರೀದಿಸುವ ರೈತ ತನ್ನ ಹೆಸರಿನಲ್ಲಿ ಕೃಷಿ ಭೂಮಿಯನ್ನು ಹೊಂದಿರಬೇಕು.
- 6.ಇತರ ಯಾವುದೇ ಸಬ್ಸಿಡಿ ಆಧಾರಿತ ಯೋಜನೆಯ ಫಲಾನುಭವಿಯಾಗಬಾರದು.
- 8.ಇದಲ್ಲದೆ, ಸಬ್ಸಿಡಿಗಾಗಿ ಅರ್ಜಿ ಸಲ್ಲಿಸುವ ರೈತರು ಕಳೆದ ಏಳು ವರ್ಷಗಳಲ್ಲಿ ಟ್ರಾಕ್ಟರ್ ಖರೀದಿಸಿರಬಾರದು.
- 9.ಟ್ರ್ಯಾಕ್ಟರ್ ಖರೀದಿಸುವ ರೈತ ತನ್ನ ಹೆಸರಿನಲ್ಲಿ ಜಮೀನು ಹೊಂದಿರಬೇಕು.
- 10.ಇತರ ಯಾವುದೇ ಸಬ್ಸಿಡಿ ಆಧಾರಿತ ಯೋಜನೆಯ ಫಲಾನುಭವಿಯಾಗಬಾರದು.
- 11.ಇದಲ್ಲದೆ, ಸಬ್ಸಿಡಿಗಾಗಿ ಅರ್ಜಿ ಸಲ್ಲಿಸುವ ರೈತರು ಕಳೆದ ಏಳು ವರ್ಷಗಳಲ್ಲಿ ಟ್ರ್ಯಾಕ್ಟರ್ ಖರೀದಿಸಿರಬಾರದು.
- 12.ಸಬ್ಸಿಡಿ ಟ್ರಾಕ್ಟರುಗಳನ್ನು ಖರೀದಿಸಲು ಪ್ರತಿ ಕುಟುಂಬಕ್ಕೆ ಒಬ್ಬ ವ್ಯಕ್ತಿಯನ್ನು ಮಾತ್ರ ಅರ್ಹವೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು.
- 1.ಆಧಾರ್ ಕಾರ್ಡ್
- 2.ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ವಿವರಗಳು.
- 3.ಗುರುತಿನ ಪುರಾವೆಗಳಾದ (ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಇತ್ಯಾದಿ)
- 4.ಛಾಯಾಚಿತ್ರ (ಪಾಸ್ ಪೋರ್ಟ್ ಗಾತ್ರ)
- 5.ಕಾನೂನುಬದ್ಧ ಖಾತೆ / ಹೊಂದಿರುವ ಭೂಮಿಯ ವಿವರಗಳು.
ಆನ್ಲೈನ್ ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿ ಸಲ್ಲಿಸಲು ಮತ್ತು ಯೋಜನೆಯ ಫಲಾನುಭವಿಯಾಗಲು ಬಯಸುವ ಎಲ್ಲಾ ಅರ್ಹ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ರಾಜ್ಯ ಮಟ್ಟದ ಕೃಷಿ ಇಲಾಖೆಗೆ ಭೇಟಿ ನೀಡಬಹುದು. ಅರ್ಜಿದಾರರು ಇವುಗಳಲ್ಲಿ ಯಾವುದಾದರೂ ಒಂದರಿಂದ ಅರ್ಜಿ ನಮೂನೆಯನ್ನ ಪಡೆಯಬಹುದು ಮತ್ತು ಫಾರ್ಮ್’ನ ವಿವರವಾದ ಅಗತ್ಯಕ್ಕೆ ಅನುಗುಣವಾಗಿ ಅರ್ಜಿಯನ್ನ ಭರ್ತಿ ಮಾಡಬಹುದು.
ಅರ್ಜಿದಾರರು,
- ಅರ್ಜಿದಾರ/ ರೈತನ ಹೆಸರು
- ಅರ್ಜಿದಾರರ ಹುಟ್ಟಿದ ದಿನಾಂಕ
- ಲಿಂಗ
- ವಿಳಾಸ ವಿವರಗಳು
- ನಿವಾಸ ಜಿಲ್ಲೆ, ಗ್ರಾಮ
- ಜಾತಿ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
ಇತರೆ ವಿವರಗಳನ್ನು ಭರ್ತಿಮಾಡಿ ಕೃಷಿ ಇಲಾಖೆಗೆ ಸಲ್ಲಿಸಬಹುದಾಗಿದೆ.
ಇದೊಂದು ರೈತಸ್ನೇಹಿ ಯೋಜನೆಯಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಫಲಾನುಭವಿಯ ನೋಂದಾಯಿತ ಬ್ಯಾಂಕ್ ಖಾತೆಗೆ ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಮೂಲಕ ಈ ಯೋಜನೆಯಡಿ ಸಬ್ಸಿಡಿ ಮೊತ್ತವನ್ನ ರೈತರಿಗೆ ಒದಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ.