- ಸರ್ಕಾರಿ ಯೋಜನೆಗಳು
- September 26, 2022
- No Comment
- 470
ಬೆಳೆ ಸಮೀಕ್ಷೆ ಆ್ಯಪ್ ಡೌನ್‌ಲೋಡ್ ಮಾಡಿ, ಬೆಳೆಯ ಫೋಟೋ ಅಪ್ಲೋಡ್ ಮಾಡಿ – ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಿರಿ : ವಿವರಗಳಿಗೆ ಈ ವರದಿ ಓದಿ..

ಕೃಷಿ ಲೋಕ : ಸರಕಾರದ ಯಾವುದೇ ಸೌಲಭ್ಯಗಳನ್ನು ನೀವು ಪಡೆಯಬೇಕಾದರೆ ಬೆಳೆ ಸಮೀಕ್ಷೆ ಆಗಿರಲೇಬೇಕು. ಇದಕ್ಕಾಗಿ ನೀವು ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಬಳಿ ಸ್ಮಾರ್ಟ್ ಮೊಬೈಲ್ ಫೋನಿದ್ದರೆ ಸಾಕು ನಿಮ್ಮ ಜಮೀನಿನಲ್ಲಿ ನಿಂತು ಹಿಂಗಾರು ಬೆಳೆ ಸಮೀಕ್ಷೆ ಮಾಡಬಹುದು. ನಿಮ್ಮ ಬೆಳೆಯ ಫೋಟೋಗಳನ್ನು ಅಪ್‌ಲೋಡ್ ಮಾಡಬಹುದು.
ಇದೊಂದು ಪಕ್ಕಾ ಸಮೀಕ್ಷೆಯಾಗಿದ್ದು, ಪ್ರತಿ ರೈತರಿಗೂ ಈ ಆ್ಯಪ್ ವರದಾನವಾಗಿದೆ. ಅಲ್ಲದೇ ಎಲ್ಲ ಜಿಲ್ಲೆಯಲ್ಲೂ ಮೊಬೈಲ್‌ನಲ್ಲಿ ಬೆಳೆ ಸಮೀಕ್ಷೆಯನ್ನು ಯಶಸ್ವಿಯಾಗಿ ಬಳಸಲಾಗುತ್ತಿದ್ದು, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕೃಷಿ ಇಲಾಖೆ ರೈತರಿಗೆ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ ಬೆಳೆ ಸಮೀಕ್ಷೆ ಬಳಕೆ ವ್ಯಾಪಕವಾಗಿದೆ. ರೈತರೇ ಸ್ವತಃ ಬೆಳೆ ಸಮೀಕ್ಷೆ ನಡೆಸಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಫೋಟೋ ಸಹಿತ ಅಪ್‌ಲೋಡ್ ಮಾಡಬಹುದು.
ಇದೀಗ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆರಂಭವಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ರೈತರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಸ್ವತಃ ತೊಡಗಿಸಿಕೊಳ್ಳಬಹುದು. ಜಮೀನಿನಲ್ಲಿ ಬೆಳೆಯ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಇದೀಗ ಈ ಬಾರಿಯ ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಕಾರ್ಯವು ಆರಂಭಗೊಂಡಿದ್ದು, ರೈತರು ಕಳೆದ ವರ್ಷದಂತೆ ಈ ವರ್ಷವೂ ಸ್ವಂತ ಜಮೀನಿನಲ್ಲಿ ಬೆಳೆ ಸಮೀಕ್ಷೆ ಮಾಡಬೇಕು. ತಾವು ಬೆಳೆದ ಬೆಳೆ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸೆ.30 ರೊಳಗೆ ರೈತರು ತಾವು ಬೆಳೆದಂತಹ ಬೆಳೆಗಳನ್ನು ಸಮೀಕ್ಷೆ ಮಾಡಬೇಕು ಹಾಗೂ ಬೆಳೆಯುವಿವರಗಳನ್ನು ದಾಖಲಿಸುವಂತೆ ಸೂಚಿಸಲಾಗಿದೆ.
ಬೆಳೆ ಸಮೀಕ್ಷೆ ಏಕೆ?
ಸಾಂಖ್ಯಿಕ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ ಮತ್ತು ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಎಣಿಕಾ ಕಾರ್ಯದಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ಧಪಡಿಸುವಲ್ಲಿ ಹಾಗೂ ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸುವ ಸಂದರ್ಭದಲ್ಲಿ, ಬೆಳೆ ವಿಮಾ ಯೋಜನೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಖರೀದಿಸಲು, ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಯ ಬೆಲೆ ಮಾನದಂಡಗಳಿಗೆ ಅನುಗುಣವಾಗಿ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ, ಅರ್ಹ ಫಲಾನುಭವಿಗಳನ್ನು ಗುರುತಿಸಲು,ಪಹಣಿಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ಉಪಯೋಗಿಸಲಾಗುತ್ತದೆ.
ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ, ಸರ್ವೆ ನಂಬರ್ ನಮೂದಿಸಿ, ಹಿಸ್ಸಾ ಇದ್ದರೆ ಅದನ್ನೂ ಆಯ್ಕೆ ಮಾಡುವುದು. ಮಾಲೀಕರ ಹೆಸರು ಆಯ್ಕೆ ಮಾಡಿ ಹಾಗೂ ಕ್ಷೇತ್ರವನ್ನು ನಮೂದಿಸಿ. ಮಾಲೀಕರ ಪರ ಇನ್ನೊಬ್ಬರು ಬೆಳೆ ದಾಖಲೆ ಮಾಡುತ್ತಿದ್ದರೆ, ರೈತರ ಪರವಾಗಿ ಬೆಳೆ ಮಾಹಿತಿ ದಾಖಲಿಸುತ್ತಿದ್ದೇನೆಂದು ಆಯ್ಕೆ ಮಾಡಬೇಕು.
ಸದರಿ ರೈತರ ಮೊಬೈಲ್ ನಂಬರ್ ದಾಖಲಿಸಿ ಮಾಹಿತಿಯನ್ನು ಡೌನ್ ಲೋಡ್ ಮಾಡಿ, ಸದರಿ ರೈತರ ಹೊಲಕ್ಕೆ ಹೋಗಿ ಸರ್ವೆ ನಂಬರ್, ಗಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ, ಫೋಟೋ ತೆಗೆದು ಮಾಹಿತಿಯನ್ನು ಸೇರಿಸಬೇಕು.
ಸಮೀಕ್ಷೆ ಏಕೆ ಬೇಕು?
ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ ಮತ್ತು ಬೆಳೆ ಪರಿಹಾರ ಹಾಗೂ ಸರಕಾರದ ನಾನಾ ಯೋಜನೆಗಳ ಸವಲತ್ತುಗಳನ್ನು ಪಡೆಯಲು ಬೆಳೆ ಸಮೀಕ್ಷೆ ಬಳಸಲಾಗುತ್ತದೆ. ಮೊಬೈಲ್ ಆ್ಯಪ್ ಬಳಸಲು ನಿಮ್ಮ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯುವುದು.
ಆ್ಯಪ್ ಡೌನ್‌ಲೋಡ್ ಹೇಗೆ?
2021 ಹಿಂಗಾರು ಬೆಳೆ ಸಮೀಕ್ಷೆ ಅಪ್ಲಿಕೇಷನ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಯಾರನ್ನು ಸಂಪರ್ಕಿಸಬಹುದು?
ಮೊಬೈಲ್ ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ಮಾಡಲು ಸಾಧ್ಯವಾಗದಿದ್ದರೆ ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಬಳಸಲು ನಿಮ್ಮ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯಬಹುದು, ಕಂದಾಯ ಇಲಾಖೆ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ಕೃಷಿ, ರೇಷ್ಮೆ ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ
ಬೆಳೆ ಸಮೀಕ್ಷೆ ಸಹಾಯವಾಣಿ – 8448447715 ಆಯಾ ತಾಲೂಕಿನ ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಸಹಾಯ ಪಡೆಯಬಹುದು. ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ಸರಿಯಾಗಿ ಅಪ್‌ಲೋಡ್ ಮಾಡದಿದ್ದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗುವ ಸಂಭವವಿರುತ್ತದೆ.
ಅಪ್‌ಲೋಡ್ ಮಾಡಬಹುದಾದ ಬೆಳೆಗಳು
ಹಣ್ಣಿನ/ ತೋಟದ, ತರಕಾರಿ, ಹೂವು, ಔಷಧ ಹಾಗೂ ಸಾಂಬಾರು ಪದಾರ್ಥ, ಅಪ್ರಧಾನ ಹಣ್ಣುಗಳು, ಕೃಷಿ ಹಾಗೂ ರೇಷ್ಮೆ ಬೆಳೆಗಳು, ಬದುಗಳಲ್ಲಿನಾಟಿ ಮಾಡಿರುವ ಮರಗಳು – ತೋಟದ, ಅರಣ್ಯ ಜಾತಿಯ ಕನಿಷ್ಠ 5 ಮರಗಳು ಮೇವು ಇತ್ಯಾದಿಗಳ ಫೋಟೋಗಳನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ ಬೆಳೆ ಸಮೀಕ್ಷೆ ಮಾಡಬಹುದಾಗಿದೆ.
ಮಾಹಿತಿ ಅಪ್ಲೋಡ್ನಿಂದ ಆಗುವ ಲಾಭ
ರೈತರು ಒಂದು ವೇಳೆ Kharif Farmer Crop 2022-23 (ಮುಂಗಾರು ರೈತರ ಬೆಳೆ ಸಮೀಕ್ಷೆ 2022-23) ಆ್ಯಪ್ ಮೂಲಕ ಮಾಹಿತಿಯನ್ನು ಹಂಚಿಕೊಳ್ಳದೇ ಹೋದಲ್ಲಿ ಪರಿಹಾರ ವಿತರಣೆ ಸಮಯದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಇಲ್ಲಿ ಹಂಚಿಕೊಳ್ಳಲಾಗುವ ಬೆಳೆಗಳ ಮಾಹಿತಿ ಆಧರಿಸಿ ಕನಿಷ್ಟ ಬೆಂಬಲ ಬೆಲೆ ನಿಗದಿ, ಬೆಳೆ ಪರಿಹಾರ, ಬೆಳೆ ವಿಮಾ ಯೋಜನೆ, ಪ್ರಾಕೃತಿಕ ವಿಕೋಪದಡಿ ಪರಿಹಾರ ಧನ ಹಾಗೂ ಬೆಳೆ ಹಾನಿ ಕುರಿತು ವರದಿ ತಯಾರಿಸಲು ಇದು ಸಹಕಾರಿಯಾಗುವುದು.