- ತೋಟಗಾರಿಕೆಮಾದರಿ ಕೃಷಿಕರು
- March 27, 2022
- No Comment
- 5663
ಈ ಬೆಳೆಯಿಂದ ಕೇವಲ ಐದು ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ಗಳಿಸಬಹುದು

ಕೃಷಿ ಲೋಕ : ಅತಿ ಕಡಿಮೆ ಸಮಯದಲ್ಲಿ ಪ್ರಾಮಾಣಿಕವಾಗಿ ಹಣ ಸಂಪಾದಿಸಲು ಬಯಸಿದರೆ ನಾವು ನೀಡುವ ಈ ಐಡಿಯಾವನ್ನು ನೀವು ತಿಳಿದುಕೊಳ್ಳಲೇಬೇಕು. ಕೇವಲ 5 ವರ್ಷಗಳಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಐಡಿಯಾ ಇದಾಗಿದ್ದು, ಕೃಷಿಯ ಮೂಲಕವೂ ಶೀಘ್ರವಾಗಿ ಶ್ರೀಮಂತರಾಗಲು ಹೀಗೆ ಮಾಡಿ..
ಹೆಬ್ಬೇವಿನ ಬೇಸಾಯ ಮಾಡುವ ಮೂಲಕ ಕೆಲವೇ ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. ತುಂಬಾ ಜಾಗವಿದ್ದರೆ ನಿಮಗೆ ಬಹಳ ಲಾಭ ಸಿಗಲಿದೆ. ಈ ಮರಗಳನ್ನು ಈಗಾಗಲೇ ಬೆಳೆದಿರುವ ಬೆಳೆಗಳೊಂದಿಗೆ ಸಹ ನೆಡಬಹುದು. ಆದ್ದರಿಂದ ನಿಮಗೆ ಹೆಚ್ಚುವರಿ ಭೂಮಿ ಅಗತ್ಯವಿಲ್ಲ
ಹೆಬ್ಬೇವು ಅಥವಾ ಮೆಲಿಯಾ ದುಬಿಯಾ ಈ ಮರವನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. Meliaceae ಸಸ್ಯಶಾಸ್ತ್ರೀಯ ಕುಟುಂಬದಿಂದ ಹುಟ್ಟಿದ ಹೆಬ್ಬೇವು ನೀಲಗಿರಿಯಂತೆ ವೇಗವಾಗಿ ಬೆಳೆಯುತ್ತದೆ.

ಇದನ್ನು ಎಲ್ಲಿ ಬೆಳೆಸಲಾಗುತ್ತಿದೆ?
ಇದರ ಗಿಡಗಳನ್ನು ನೆಟ್ಟ 2 ವರ್ಷಗಳಲ್ಲಿ ಸುಮಾರು 40 ಅಡಿ ಎತ್ತರಕ್ಕೆ ಬೆಳೆಯುತ್ತವೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ರೈತರು ಈ ಮರವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುತ್ತಿದ್ದಾರೆ.
ಮರಗಳನ್ನು ನೆಡುವುದು ಹೇಗೆ?

ಹೆಬ್ಬೇವಿನ ಮರದ ಸ್ವರೂಪದಲ್ಲಿ ಬೆಳೆಯುತ್ತದೆ. ಇದು ಸಾಮಾನ್ಯ ಬೇವಿಗಿಂತ ಸ್ವಲ್ಪ ಭಿನ್ನವಾಗಿದೆ. ಇದನ್ನು ಎಲ್ಲಾ ರೀತಿಯ ಮಣ್ಣಿನಲ್ಲಿ ಸುಲಭವಾಗಿ ಬೆಳೆಸಬಹುದು. ಇದಕ್ಕೆ ಹೆಚ್ಚು ನೀರು ಬೇಕಾಗಿಲ್ಲ. ಕಡಿಮೆ ನೀರಿನಲ್ಲಿ ಚೆನ್ನಾಗಿ ಬೆಳೆಯಬಲ್ಲವು. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಅದರ ಬೀಜಗಳನ್ನು ಬಿತ್ತಲು ಉತ್ತಮವೆಂದು ಪರಿಗಣಿಸಲಾಗಿದೆ.

ಎಲ್ಲೆಲ್ಲಿ ಬೆಳೆಯಬಹುದು?
ಇದು ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯುತ್ತದೆ. 4 ಎಕರೆ ಪ್ರದೇಶದಲ್ಲಿ 5000 ಹೆಬ್ಬೇವಿನ ಗಿಡಗಳನ್ನು ನೆಡಬಹುದು. ಇದರಲ್ಲಿ 2000 ಮರಗಳನ್ನು ಗದ್ದೆಯ ಹೊರಗಿರುವ ಗುಡ್ಡದ ಮೇಲೆ ಮತ್ತು 3000 ಮರಗಳನ್ನು ನೆಡಬಹುದು.
ಐದು ವರ್ಷಗಳಲ್ಲಿ, ಈ ಮರವನ್ನು ಬಳಕೆಗೆ ಉಪಯೋಗಿಸಬಹುದಾಗಿದೆ. ಇದರ ಗಿಡ ಒಂದು ವರ್ಷದಲ್ಲಿ 8 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಇದರ ಗಿಡಗಳಲ್ಲಿ ಗೆದ್ದಲು ಇಲ್ಲದಿರುವುದರಿಂದ ಇದರ ಬೇಡಿಕೆ ಹೆಚ್ಚು. ಅದರ ಮರವನ್ನು ಪ್ಲೈವುಡ್ ಉದ್ಯಮಕ್ಕೆ ಹೆಚ್ಚು ಹೇಳಿಮಾಡಿಸಿದ ಜಾತಿ ಎಂದು ಪರಿಗಣಿಸಲಾಗಿದೆ.

ಎಷ್ಟು ಹಣ ಗಳಿಸಬಹುದು?

ನೀವು 8 ವರ್ಷಗಳ ನಂತರ ಮಲಬಾರ್ ಬೇವಿನ ಮರವನ್ನು ಮಾರಾಟ ಮಾಡಬಹುದು. ಇದನ್ನು 4 ಎಕರೆಯಲ್ಲಿ ಬೆಳೆಸುವ ಮೂಲಕ ಸುಮಾರು 50 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಒಂದು ಮರವು ಒಂದೂವರೆಯಿಂದ ಎರಡು ಟನ್ ತೂಗುತ್ತದೆ.
ಕನಿಷ್ಠ 500 ರೂಪಾಯಿ ಕ್ವಿಂಟಲ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಗಿಡವನ್ನು 6000-7000 ರೂ.ಗೆ ಮಾರಾಟ ಮಾಡಿದರೂ ರೈತರು ಸುಲಭವಾಗಿ ಲಕ್ಷಾಂತರ ರೂ. ಗಳಿಸಬಹುದಾಗಿದೆ. ಪ್ಲೈವುಡ್ ಉದ್ಯಮಕ್ಕೆ ಉತ್ತಮ ಬೇವಿನ ಮರಗಳು ಎಂದಿಗೂ ಬೇಕಾಗುತ್ತವೆ. ಆದ್ದರಿಂದ ಬೇಡಿಕೆಯು ಎಂದಿಗೂ ಕುಸಿಯುವ ಹೆದರಿಕೆ ಬೇಡ.

ನೀವು ಊರಲ್ಲೇ ಇದ್ದು ಹಣ ಗಳಿಸುವ ಇಚ್ಛೆ ಇದ್ದಲ್ಲಿ ಖಂಡಿತ ಈ ಪ್ರಯತ್ನ ಮಾಡಬಹುದು. ಬೇವು ನಿಮ್ಮ ಜೀವನದಲ್ಲಿ ಸಿಹಿಯನ್ನೂ ತರಬಲ್ಲದು ಎಂದು ಸಾಬೀತುಗೊಳಿಸಲು ಈ ಬೆಳೆ ಬೆಳೆಯಬಹುದು.