- ತೋಟಗಾರಿಕೆ
- December 13, 2022
- No Comment
- 1034
ದಪ್ಪ ಮೆಣಸಿನಕಾಯಿ ಅಥವಾ ಕ್ಯಾಪ್ಸಿಕಂ ಬೆಳೆಯಿಂದ ಲಕ್ಷಗಟ್ಟಲೆ ಆದಾಯ – ಕ್ಯಾಪ್ಸಿಕಂ ಕೃಷಿಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ…

ಕೃಷಿ ಲೋಕ : ರೈತರು ಆರ್ಥಿಕವಾಗಿ ಸದೃಢರಾಗಲು, ಲಾಭ ಗಳಿಸಲು ಕ್ಯಾಪ್ಸಿಕಂ ಬೆಳೆ ಅತ್ಯುತ್ತಮ ಆಯ್ಕೆಯಾಗಿದೆ. ಲಕ್ಷಗಟ್ಟಲೆ ಆದಾಯವಿದೆ. ಕ್ಯಾಪ್ಸಿಕಂ ಕೃಷಿಯು ಬಹಳಷ್ಟು ತರಕಾರಿಗಳಂತೆ ಎಲ್ಲಾ ರೀತಿಯ ಹವಾಮಾನಕ್ಕೂ ಸೂಕ್ತವಾಗಿದೆ. ಕ್ಯಾಪ್ಸಿಕಂ ಉತ್ತಮ ಇಳುವರಿ ಬಂದಷ್ಟೂ ಆದಾಯ ಉತ್ತಮವಾಗಿರುತ್ತದೆ.

ಹಾಗಾದರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ಕ್ಯಾಪ್ಸಿಕಂ ಬೆಳೆ ಬೆಳೆದು ಅಧಿಕ ಲಾಭ ಪಡೆಯುವುದು ಹೇಗೆ? ಕ್ಯಾಪ್ಸಿಕಂ ಬೆಳೆದರೆ ಲಾಭ ಎಷ್ಟು? ಇದರ ಮತ್ತಿತರ ಮಾಹಿತಿ ಇಲ್ಲಿದೆ.
ರೈತ ತನ್ನ ಬೆಳೆಗೆ ಸರಿಯಾದ ಆರ್ಥಿಕ ಲಾಭ ಪಡೆಯಬೇಕಾದರೆ ಸಮಯ ಮತ್ತು ಮಾರುಕಟ್ಟೆಗೆ ಅನುಗುಣವಾಗಿ ಬೇಸಾಯ ಮಾಡಬೇಕು. ಜನರ ವೈವಿಧ್ಯಮಯ ಆಹಾರದ ಆದ್ಯತೆಗಳ ಪ್ರಕಾರ ತರಕಾರಿ ಬೆಳೆ ಕೃಷಿಯನ್ನು ಆಯ್ಕೆ ಮಾಡಿಕೊಳ್ಳಬೇಕು, ವಿಶೇಷವಾಗಿ ಸಂಗ್ರಹಯೋಗ್ಯ ತರಕಾರಿಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ ಎಂಬುದನ್ನು ಅನೇಕ ರೈತರು ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೊಡುವುದಾದರೆ ಮಾರುಕಟ್ಟೆಯಲ್ಲಿ ಇತರ ತರಕಾರಿಗಳಿಗಿಂತ ಕ್ಯಾಪ್ಸಿಕಂ ಉತ್ತಮ ಬೆಲೆ ತಂದುಕೊಡುತ್ತದೆ ಎನ್ನಬಹುದು.

ಇದರಿಂದ ರೈತರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ದೂರದ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಕ್ಯಾಪ್ಸಿಕಂ ಕೃಷಿಯಿಂದ ಉತ್ತಮ ಆದಾಯವನ್ನು ಗಳಿಸುತ್ತಿರುವ ಅನೇಕ ರೈತರಿದ್ದಾರೆ. ಇಲ್ಲಿನ ರೈತರು ಉತ್ಪಾದಿಸುವ ಕ್ಯಾಪ್ಸಿಕಂ ಅನ್ನು ದೆಹಲಿ ಮತ್ತು ಆಗ್ರಾಕ್ಕೆ ಸಾಗಿಸಲಾಗುತ್ತದೆ. ಕ್ಯಾಪ್ಸಿಕಂ ಉತ್ತಮ ಮತ್ತು ಲಾಭದಾಯಕ ಬೆಳೆ ಎಂದು ಅನೇಕ ರೈತರು ಹೇಳುತ್ತಾರೆ. ಈ ತರಕಾರಿಯ ಕೃಷಿಯಿಂದ ರೈತರ ಆದಾಯ ಹೆಚ್ಚುತ್ತದೆ. ಸಾಮಾನ್ಯ ತರಕಾರಿಗಳಂತೆ, ಕ್ಯಾಪ್ಸಿಕಂ ಕೃಷಿಯು ಎಲ್ಲಾ ಹವಾಮಾನಗಳಿಗೆ ಸೂಕ್ತವಾಗಿದೆ. ಕ್ಯಾಪ್ಸಿಕಂ ಉತ್ತಮ ಇಳುವರಿ ಬಂದರೆ ಆದಾಯವೂ ಉತ್ತಮವಾಗಿರುತ್ತದೆ.
ಮೆಣಸಿನ ಕಾಯಿ ಋತುಮಾನದ ಉದ್ದಕ್ಕೂ ಬೆಳೆಯುವಂಥದ್ದು. ಅದರ ಬೀಜವನ್ನು ಹಾಕುವುದಕ್ಕಿಂತ ಮುನ್ನ ಎರಡು ದಿನ ನೀರಿನಲ್ಲಿ ನೆನಸಿ ಇಡಬೇಕು. ಬೀಜಗಳು ಸ್ವಲ್ಪ ಮೊಳಕೆ ಬಂದ ಬಳಿಕ ಆಳವಾದ ಮಣ್ಣಿನಲ್ಲಿ ಹಾಕಬೇಕು.

ಹನಿ ನೀರಾವರಿಯ ಪ್ರಯೋಜನಗಳು:
ಕ್ಯಾಪ್ಸಿಕಂ ತಳಿ ಹನಿ ನೀರಾವರಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ವಾಸ್ತವವಾಗಿ ಇದು ಕೃಷಿಗೆ ಉತ್ತಮ ನೀರಾವರಿ ವ್ಯವಸ್ಥೆಯಾಗಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವ ರೈತರು ನಿಧಾನವಾಗಿ ಅದರಿಂದ ಹೊರಬಂದು ಹನಿ ನೀರಾವರಿ ಅಳವಡಿಸಿಕೊಳ್ಳುತ್ತಿದ್ದಾರೆ. ಹನಿ ನೀರಾವರಿಯಿಂದ ನೀರನ್ನು ಹಿತಮಿತವಾಗಿ ಬಳಸಿ, ಉಳಿಸಬಹುದು. ಮತ್ತು ನೀರನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಬಹುದು. ದುಂದು ವೆಚ್ಚ ಅನ್ನಿಸುವಷ್ಟು ನೀರನ್ನು ಬಳಸದೆ, ಉಳಿತಾಯ ಮಾಡಬಹುದು. ಈ ಪದ್ಧತಿಯ ಕೃಷಿಗೆ ಸರಕಾರ ಭಾರೀ ಅನುದಾನವೂ ನೀಡುತ್ತಿದೆ.
ಕೇವಲ 75 ದಿನಗಳಲ್ಲಿ ಕ್ಯಾಪ್ಸಿಕಂ ಇಳುವರಿ ಪಡೆಯಬಹುದು.
ಜಮೀನಿನಲ್ಲಿ ಕಳೆ ಕಿತ್ತ ನಂತರ ಸೂಕ್ತ ರಾಸಾಯನಿಕಗಳಿಂದ ಸಿಂಪಡಿಸಿ. ಕ್ಯಾಪ್ಸಿಕಂ ಪೈರನ್ನು ರೈತರು ಸೂಕ್ತ ಅಂತರದಲ್ಲಿ ನೆಡುತ್ತಾರೆ. ಗಿಡದ ಬೆಳವಣಿಗೆಗೆ ಸರಿಯಾದ ಗೊಬ್ಬರ, ನೀರು, ಕೀಟನಾಶಕ ಸಿಂಪಡಿಸಿದರೆ ಬೆಳೆ ಇಳುವರಿ ಹೆಚ್ಚು. ಕ್ಯಾಪ್ಸಿಕಂ ಕೃಷಿಗೆ ಮಣ್ಣಿನ pH 6 ಇರಬೇಕು. ಕ್ಯಾಪ್ಸಿಕಂ ಸಸ್ಯವು 40 ಡಿಗ್ರಿ ವರೆಗೆ ತಾಪಮಾನವನ್ನು ತಡೆದುಕೊಳ್ಳುತ್ತದೆ. ನೆಟ್ಟ 75 ದಿನಗಳ ನಂತರ ಸಸ್ಯವು ಇಳುವರಿಯನ್ನು ಪ್ರಾರಂಭಿಸುತ್ತದೆ. ಒಂದು ಹೆಕ್ಟೇರ್‌ನಲ್ಲಿ ಸುಮಾರು 300 ಕ್ವಿಂಟಾಲ್ ಕ್ಯಾಪ್ಸಿಕಂ ಉತ್ಪಾದನೆಯಾಗುತ್ತದೆ.
ಇನ್ನೂ ಕೊಯ್ಲು ಮಾಡಿದ ಬಳಿಕ ಕ್ಯಾಪ್ಸಿಕಂ ಬೇಗ ಕೊಳೆಯುವುದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಸಾವಿರಾರು ಕೆಜಿ ಲೆಕ್ಕದಲ್ಲಿ ಕ್ಯಾಪ್ಸಿಕಂ ಮಾರಾಟವಾಗುತ್ತಿದೆ. ಕ್ಯಾಪ್ಸಿಕಂ ಮಾರಾಟದಿಂದ ರೈತರು ಲಕ್ಷಗಟ್ಟಲೆ ಲಾಭ ಗಳಿಸುತ್ತಿದ್ದಾರೆ. ಇದು ಸುಮಾರು 6 ತಿಂಗಳಲ್ಲಿ ಇಳುವರಿ ನೀಡುತ್ತದೆ.
ಗಿಡಗಳ ಎಲೆಗಳ ಮೇಲೆ ರಂಧ್ರಗಳು ಕಾಣಿಸಿಕೊಂಡಾಗ ತಕ್ಷಣ ಮರಗಳಿಗೆ ಗಂಧಕವನ್ನು ಸಿಂಪಡಿಸಿ. ಮೊಸಾಯಿಕ್ ರೋಗ, ಉತ್ತ ರೋಗ. ಕಾಂಡಕೊರಕದಂತಹ ಶಿಲೀಂಧ್ರ ಕೀಟಗಳಿಂದ ಬೆಳೆಗೆ ಹೆಚ್ಚು ಹಾನಿ ಸಂಭವಿಸುತ್ತದೆ. ಸಮಯೋಚಿತ ಆರೈಕೆಯೊಂದಿಗೆ, ಕ್ಯಾಪ್ಸಿಕಂ ಸಸ್ಯ ನಳನಳಿಸುವಂತೆ ಕಾಪಾಡಬಹುದು. ಸಾಮಾನ್ಯವಾಗಿ ಸುಮಾರು 300 ಕ್ವಿಂಟಲ್ ಇಳುವರಿ, ಅನುಕೂಲಕರ ಹವಾಮಾನ ಇದ್ದರೆ 500 ಕ್ವಿಂಟಲ್ ಇಳುವರಿ ಪಡೆಯಬಹುದು. ತೋಟಗಾರಿಕಾ ಇಲಾಖೆಯ ಮಾಹಿತಿ ಪ್ರಕಾರ ಕ್ಯಾಪ್ಸಿಕಂ ಬೆಳೆಗಾರರಿಗೆ ಸಹಾಯಧನ, ಬೀಜ ಸರಬರಾಜು ಮಾಡಲಾಗುತ್ತದೆ. ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಶೇ.70 ವರೆಗೆ ಸಹಾಯಧನ ನೀಡಲಾಗುತ್ತದೆ.
ಮೆಣಸಿನಕಾಯಿ ಗಿಡಗಳಿಗೆ ತುಸು ಹೆಚ್ಚಾಗಿಯೇ ಸೂರ್ಯನ ಬೆಳಕು ಅಗತ್ಯ. ಸಾಕಷ್ಟು ಸೂರ್ಯನ ಬೆಳಕು ಗಿಡಕ್ಕೆ ಬಿದ್ದರೆ ಇದರ ಬೆಳವಣಿಗೆ ಹೆಚ್ಚುತ್ತದೆ. ಜತೆಗೆ ಇಳವರಿ ಕೂಡ ಚೆನ್ನಾಗಿ ಆಗುತ್ತದೆ.
- ಬೀಜಗಳನ್ನು ಹಾಕುವಾಗ ತುಂಬಾ ಹತ್ತಿರ ಬಿತ್ತಬಾರದು. ಏಕೆಂದರೆ ಗಿಡಗಳಿಗೆ ಹರಡಿಕೊಳ್ಳಲು ಸ್ಥಳಾವಕಾಶ ಕಡಿಮೆಯಾಗುತ್ತದೆ.
- ಮಣ್ಣು ತೇವಭರಿತವಾಗಿರಬೇಕು. ಹೆಚ್ಚು ಒದ್ದೆ ಕೂಡ ಇರಬಾರದು.
- ಬೀಜಗಳು ಮೊಳಕೆಯೊಡೆದು ಗಿಡ ಚಿಗುರಿದ ನಂತರ ಸೂರ್ಯನ ಬೆಳಕು ಸಾಕಷ್ಟಿರುವ ಸ್ಥಳದಲ್ಲಿ ಪಾಟ್‌ಗಳನ್ನು ಇರಿಸಬೇಕು.
- ಬ್ಯಾಕ್ಟೀರಿಯಾಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಗುಣಮಟ್ಟದ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಸಿಂಪಡಿಸಬೇಕು.
- ಮೂರು ತಿಂಗಳ ನಂತರ ದಪ್ಪ ಮೆಣಸಿನ ಕಾಯಿಗಳು ಬೆಳೆಯುತ್ತದೆ. ಇದರಿಂದ ನಾನಾ ಖಾದ್ಯ ತಯಾರಿಸಬಹುದು.