- ತೋಟಗಾರಿಕೆ
- August 29, 2023
- No Comment
- 2541
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ನ್ಯೂಸ್ ಆ್ಯರೋ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ ಮಾಡಿದ್ದಾರೆ.
ಹೊಸ ಟ್ರೆಂಡ್
ಸದ್ಯ ಕಂಡು ಬಂದಿರುವ ಇಂತಹ ಬದಲಾವಣೆ ಇದೇ ಮೊದಲ ಬಾರಿ ಎಂದು ವಿಶ್ಲೇಷಿಸಲಾಗುತ್ತಿದೆ. ರಖಂ ವ್ಯಾಪಾರಸ್ಥರು ಕೂಡ ಗುಣಮಟ್ಟದ ಅಡಿಕೆ ಬದಲು ಕಡಿಮೆ ದರದ ಅಡಿಕೆ ಖರೀದಿಸುತ್ತಿದ್ದಾರೆ. ಇದು ಬೆಳೆಗಾರರು, ಮಾರುಕಟ್ಟೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಸುಮಾರು 6 ತಿಂಗಳಿನಿಂದ ಉತ್ತರ ಭಾರತದ ಖರೀದಿದಾರರು ಕಡಿಮೆ ಕ್ರಯದ ಅಡಿಕೆ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಇಲ್ಲಿಂದ ಕಡಿಮೆ ಕ್ರಯಕ್ಕೆ ಖರೀದಿಸಿ ಅಲ್ಲಿ ಅಧಿಕ ಮೊತ್ತಕ್ಕೆ ಮಾರಾಟ ಮಾಡುವ ತಂತ್ರವನ್ನು ಉತ್ತರ ಭಾರತದ ವ್ಯಾಪಾರಿಗಳು ಅನುಸರಿಸುತ್ತಿದ್ದಾರೆ.
ಉತ್ತರ ಭಾರತದ ರಖಂ ವ್ಯಾಪಾರಿಗಳು ಅಡಿಕೆಯನ್ನು ಹಿಂದಿನಂತೆ ದಾಸ್ತಾನು ಇರಿಸುವುದಿಲ್ಲ. ಆಗಿಂದಾಗ್ಗೆ ಮಾರಾಟ ಮಾಡಿ ಬಿಡುತ್ತಾರೆ. ಕ್ಯಾಂಪ್ಕೋದಿಂದ ಮುಖ್ಯವಾಗಿ ಅಡಿಕೆ ಗುಜರಾತ್ ಗೆ ತೆರಳುತ್ತದೆ. ಬಿಹಾರ, ಉತ್ತರ ಪ್ರದೇಶದಲ್ಲೂ ಇಲ್ಲಿನ ಅಡಿಕೆಗೆ ಉತ್ತಮ ದರ ಇದೆ. ಆದರೆ ಇವರೆಲ್ಲ ಈಗ ಗುಣಮಟ್ಟದ ಬದಲು ಕಡಿಮೆ ದರವನ್ನೇ ಅನುಸರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊಸ ಅಡಿಕೆಗೆ ಉತ್ತಮ ಬೇಡಿಕೆ ಇರುವುದರಿಂದ ಧಾರಣೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಪ್ರಸ್ತುತ ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಗೆ ಕೆ.ಜಿ.ಗೆ 450 ರೂ. ಇದ್ದರೆ ಹಳೆ ಅಡಿಕೆಗೆ ಕೆ.ಜಿ.ಗೆ 480 ರೂ. ಇದೆ. ಅಕ್ಟೋಬರ್ ವೇಳೆಗೆ ಹೊಸ ಅಡಿಕೆ ಬೆಲೆ ಕೆ.ಜಿ.ಗೆ 470 ರೂ.ಗೆ ಏರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.