ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯ ಪ್ರಥಮ ಹಂತದ ತೆಂಗು ರೈತ ಕಾರ್ಡ್ ವಿತರಣೆ, ತೆಂಗು ರೈತ ಕಾರ್ಡ್ ಹೊಂದಿರುವ ರೈತರಿಗೆ ಸಿಗುವ ಸೌಲಭ್ಯಗಳೇನು ? ಇಲ್ಲಿದೆ ಸಂಪೂರ್ಣ ಮಾಹಿತಿ…

ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯ ಪ್ರಥಮ ಹಂತದ ತೆಂಗು ರೈತ ಕಾರ್ಡ್ ವಿತರಣೆ, ತೆಂಗು ರೈತ ಕಾರ್ಡ್ ಹೊಂದಿರುವ ರೈತರಿಗೆ ಸಿಗುವ ಸೌಲಭ್ಯಗಳೇನು ? ಇಲ್ಲಿದೆ ಸಂಪೂರ್ಣ ಮಾಹಿತಿ…

ಕೃಷಿ ಲೋಕ : ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯ “ತೆಂಗು ರೈತ ಕಾರ್ಡ್” ನ್ನು ಇಂದು ಸುಳ್ಯದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ಸುಳ್ಯ ತಾಲೂಕು ಮಟ್ಟದ ವಿಶೇಷ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿಕಿರಣ್ ಪುಣಚ , ಜಿಲ್ಲಾಧ್ಯಕ್ಷರಾದ ಶ್ರೀ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಮತ್ತು ಸೇರಿದ್ದ ರೈತ ಮುಖಂಡರುಗಳು ಜೊತೆಗೂಡಿ ಬಿಡುಗಡೆಗೊಳಿಸಿದರು. ಇದೇ ವೇಳೆ ಸಂಸ್ಥೆಯಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿರುವ ತೆಂಗು ರೈತರಿಗೆ ತೆಂಗು ರೈತ ಕಾರ್ಡನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಂ. ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಕುಸುಮ್ ರಾಜ್, ಸುಳ್ಯ ತಾಲ್ಲೂಕು ಸಂಸ್ಥೆಯ ಸಿಬ್ಬಂದಿಗಳು ಮತ್ತು ತಾಲ್ಲೂಕು ರೈತಾಪಿ ವರ್ಗದವರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯಲ್ಲಿ ನೊಂದಾಯಿತ ರೈತರಿಗೆ “ತೆಂಗು ರೈತ ಕಾರ್ಡ್” ನ್ನು ನೀಡಲಾಗುತ್ತಿದೆ.

ಈ ಕಾರ್ಡ್ ಹೊಂದಿರುವ ರೈತರಿಗೆ ಸಿಗುವ ಸೌಲಭ್ಯಗಳು ಇಂತಿವೆ :

  • ಸಂಸ್ಥೆಯ ವ್ಯಾಪ್ತಿಗೆ ಒಳಪಟ್ಟ 4 ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಕೊಡಗು, ಮತ್ತು ಕಾಸರಗೋಡು ರೈತನು ರೈತ ಸಂಸ್ಥೆಗೆ ಕೊಡುವ ತೆಂಗಿನಕಾಯಿಯನ್ನು ಸಂಸ್ಥೆಯು ವಿವಿಧ ರೀತಿಯಲ್ಲಿ ಮೌಲ್ಯವರ್ಧನೆ (Processing) ಮಾಡುತ್ತದೆ. ಮೌಲ್ಯವರ್ಧನೆ ಮಾಡಿದ ತೆಂಗಿನಕಾಯಿ ಉತ್ಪನ್ನಗಳನ್ನು ತೆಂಗು ರೈತ ಸಂಸ್ಥೆಯು ವಿವಿಧ ದೇಶಗಳಿಗೆ ರಫ್ತು ಮಾಡುವ ಉದ್ದೇಶವನ್ನು ಹೊಂದಿರುತ್ತದೆ.
  • ಒಂದು ರೈತನಿಗೆ ತಲಾ 750 ರೂಪಾಯಿ ಶೇರ್ ಬಂಡವಾಳ ಹಾಗೂ 250 ರೂಪಾಯಿ ಸಂಸ್ಥೆಯ ಸದಸ್ಯತ್ವವನ್ನು ಹೊಂದಲು ಅರ್ಹರಾಗಿರುತ್ತಾರೆ. ಒಂದು ರೈತನ ಕೃಷಿ ಕುಟುಂಬದಲ್ಲಿ ಎಷ್ಟು ಸದಸ್ಯರು ಬೇಕಾದರೂ ಸದಸ್ಯತ್ವವನ್ನು ಹೊಂದಬಹುದು.
  • ಜಿಲ್ಲೆಯಲ್ಲಿರುವ ತೆಂಗಿನ ಮರ ಮತ್ತು ಅಡಿಕೆ ಮರ ಹತ್ತುವ ಕಾರ್ಮಿಕ ವರ್ಗದವರಿಗೆ ಅವರ ಕುಟುಂಬದ ಭವಿಷ್ಯದ ನೆಲೆಯಲ್ಲಿ ರೂ 25 ಲಕ್ಷದ ವರೆಗೆ ವಿಮಾ ರಕ್ಷಣಾ ಯೋಜನೆ ತೆಂಗಿನ ಕಾಯಿ ಮತ್ತು ತೆಂಗಿನ ಮರದ ಮೌಲ್ಯವರ್ಧನ ಉತ್ಪಾದನೆಯ ಬೃಹತ್ ಯೋಜನೆಯನ್ನು ಹಾಕಿಕೊಂಡಿದೆ.
  • ಇನ್ನೂ ಕೆಲವೇ ದಿನಗಳಲ್ಲಿ ಸಂಸ್ಥೆಯ ಸ್ಥಳೀಯ ಸಂಪನ್ಮೂಲ ಸಿಬ್ಬಂದಿಗಳ ಮೂಲಕ ನೋಂದಾಯಿಸಲ್ಪಟ್ಟ ರೈತರಿಂದ ಆಯಾ ತಾಲೂಕಿನ ಹೋಬಳಿಗಳಲ್ಲಿ ತೆಂಗಿನಕಾಯಿ ಖರೀದಿಯನ್ನು ಮಾರುಕಟ್ಟೆ ದರದಿಂದ ಹೆಚ್ಚಿನ ದರಗಳಲ್ಲಿ ಖರೀದಿಸಲಾಗುವುದು ಹಾಗೂ ಸಂಸ್ಥೆಯು ತೆಂಗಿನ ಮರಗಳಿಗೆ ವಿಶೇಷ ರೀತಿಯ ಬೆಳೆ ವಿಮೆಯನ್ನು ನೀಡಲಾಗುವುದು.
  • ತೆಂಗಿನ ಮತ್ತು ಅಡಿಕೆ ಮರಗಳಿಗೆ ವಿಶೇಷ ಪೋಷಕಾಂಶ ಹೊಂದಿರುವ ಗೊಬ್ಬರವನ್ನು ಮತ್ತು ವಿವಿಧ ರೀತಿಯ ಗುಣಮಟ್ಟದ ತೆಂಗಿನ ಸಸಿಗಳನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುವುದು.
  • ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿನ ಅಯಾ ಗ್ರಾಮಗಳಲ್ಲಿ ಇರುವ ಸೊಸೈಟಿಯ ಮುಖಂತಾರ ಶೀಘ್ರದಲ್ಲಿ ತೆಂಗು ಖರೀದಿ ಕೇಂದ್ರವನ್ನು ಸಂಸ್ಥೆಯು ಪ್ರಾರಂಭ ಮಾಡುತ್ತದೆ.
  • ರಾಜ್ಯಾದ್ಯಂತ ಹೋಬಳಿ ಮಟ್ಟದಲ್ಲಿ ಮಹಿಳಾ ಸಬಲೀಕರಣ ಯೋಜನೆಯ ಅಡಿಯಲ್ಲಿ ತೆಂಗು ರೈತರ ಮಹಿಳಾ ಉತ್ಪಾದನಾ ಸಂಸ್ಥೆ ರಚಿಸುವ ಯೋಜನೆ ಹೊಂದಿಕೊಂಡಿದೆ ಮತ್ತು ತೆಂಗು ರೈತರ ಸ್ವ-ಸಹಾಯ ಗುಂಪುಗಳನ್ನು ರಚಿಸಿ ರೈತರಿಗೆ ಕೃಷಿ ಅಭಿವೃದ್ಧಿ ಯೋಜನೆ ನೀಡಲಾಗುವುದು.
  • ರೈತರ ಅಸಹಜ ಸಾವಿಗೆ (Accidental death) ಒಂದು ಕೃಷಿ ಕುಟುಂಬಕ್ಕೆ ರೂ. 1 ರಿಂದ 2 ಲಕ್ಷ ತನಕ ಸರಕಾರವು ಸಂಸ್ಥೆಯ ಜೊತೆಗೆ ವಿಮೆ ಸೌಲಭ್ಯವನ್ನು ನೀಡುತ್ತದೆ.
  • ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ವಿಶೇಷ ರೀತಿಯ ಸಬ್ಸಿಡಿಯಲ್ಲಿ ಸರಕಾರದ ಸಹಯೋಗದೊಂದಿಗೆ ನೀಡುವ ಯೋಜನೆ ಕೂಡಾ ಹಾಕಿಕೊಂಡಿದೆ.
  • ರೈತ ಕಂಪನಿಯಲ್ಲಿ ಉತ್ಪನ್ನಗೊಳಿಸಿದ ತೆಂಗಿನಕಾಯಿಯ ಉತ್ಪನ್ನಗಳಿಗೆ ತೆಂಗು ರೈತ ಕಂಪನಿಯಲ್ಲಿ ಸದಸ್ಯತ್ವವನ್ನು ಹೊಂದಿದವನಿಗೆ 10 ರಿಂದ 15 ಶೇಕಡ(%) ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ನೀಡಲು ಉದ್ದೇಶವನ್ನು ಹೊಂದಿರುತ್ತದೆ.

Related post

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ ಲಾಭ ಗಳಿಸಬಹುದು – ಟಾಪ್ 10 ಉದ್ಯಮಗಳ ಮಾಹಿತಿ ಇಲ್ಲಿವೆ ನೋಡಿ…

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ…

ನ್ಯೂಸ್ ಆ್ಯರೋ : ಯಾವುದೇ ಲಾಭದಾಯಕ ವ್ಯವಹಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಬಹುದು. ಆದರೆ ವ್ಯಾಪಾರ ಕೈಹಿಡಿಯುವುದು ತುಂಬಾನೇ ಕಷ್ಟ.…
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ…

ನ್ಯೂಸ್ ಆ್ಯರೋ‌ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ…

Leave a Reply

Your email address will not be published. Required fields are marked *