ಕೋಟಿಗಟ್ಟಲೆ ಆದಾಯ ತರುತ್ತಿರುವ ಸೆಗಣಿ ಅವಲಂಬಿತ ಉದ್ಯಮ – ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ ದಿಟ್ಟ ಮಹಿಳೆ : ಸೆಗಣಿಯಿಂದ ಇಷ್ಟೆಲ್ಲ ಲಾಭ ಇದೆಯಾ..?

ಕೋಟಿಗಟ್ಟಲೆ ಆದಾಯ ತರುತ್ತಿರುವ ಸೆಗಣಿ ಅವಲಂಬಿತ ಉದ್ಯಮ – ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ ದಿಟ್ಟ ಮಹಿಳೆ : ಸೆಗಣಿಯಿಂದ ಇಷ್ಟೆಲ್ಲ ಲಾಭ ಇದೆಯಾ..?

ಕೃಷಿ ಲೋಕ : ಭಾರತೀಯರ ಮನೆಯಲ್ಲಿ, ಮನದಲ್ಲಿ ಹಸುವಿನ ಸೆಗಣಿಗೆ ಪವಿತ್ರವಾದ ಸ್ಥಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸೆಗಣಿಯ ಬಗ್ಗೆ ಜನರ ಮನದಲ್ಲಿ ನಕಾರಾತ್ಮಕ ಮನೋಭಾವವನ್ನು ಹುಟ್ಟು ಹಾಕುವ ಪ್ರಯತ್ನ ನಡೆಯುತ್ತಿದೆ. ಸಂಸ್ಕೃತಿಗೆ ಧಕ್ಕೆ ಮಾಡುವ ಇಂಥವರ ವಿಚಾರ ಪಕ್ಕಕ್ಕಿರಲಿ. ಸದ್ಯ ನಾವ್ ಹೇಳ್ತಿರೋದು ಹಸುವಿನ ಸೆಗಣಿಯನ್ನು ಅರ್ಥಪೂರ್ಣವಾಗಿ ಬಳಸಿ ಕೋಟಿ ಕೋಟಿ ಆದಾಯ ಪಡೆಯುತ್ತಿರುವವರ ಬಗ್ಗೆ…!!

ಹೌದು, ಭಾರತೀಯ ಸಂಸ್ಕೃತಿಯಲ್ಲಿ ಹಸುವಿನ ಸೆಗಣಿಗೆ ಮಹತ್ವವಾದ ಸ್ಥಾನವಿದೆ. ಇಲ್ಲಿನ ಆಚಾರ-ವಿಚಾರ, ಪದ್ಧತಿಯನ್ನು ಅನುಸರಿಸಿ ಶುದ್ಧಿಗಾಗಿ, ಔಷಧಿಗಾಗಿ ಹಸುವಿನ ಸೆಗಣಿಯನ್ನು ಬಳಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸೆಗಣಿಯ ಬಗ್ಗೆ ಜನರ ಮನದಲ್ಲಿ ನಕಾರಾತ್ಮಕ ಮನೋಭಾವವನ್ನು ಹುಟ್ಟು ಹಾಕುವ ಪ್ರಯತ್ನ ನಡೆಯುತ್ತಿದೆ. ಹಸುವಿನ ಸೆಗಣಿಯಲ್ಲಿ ಹಾನಿಕಾರಕ ಕೆಮಿಕಲ್ ಅಂಶವಿದೆ ಎಂಬು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

ಆದರೆ, ಕಸದಿಂದ ರಸ ಉತ್ಪಾದಿಸುವ ಒಂದು ಅದ್ಭುತ ವಿದ್ಯೆಯನ್ನು ಕರಗತ ಮಾಡಿಕೊಂಡು ಗೋವಿನ ಸಗಣಿಯಿಂದ ನಾನಾ ಪ್ರಯೋಜನ ಇದೆ ಎಂಬ ಸಂದೇಶವನ್ನು ಪಸರಿಸುತ್ತಿದ್ದಾರೆ ಬಿಹಾರದ ಸಮಸ್ತಿಪುರ ಜಿಲ್ಲೆಯ ಮಹಿಳೆ ಪ್ರೇಮಲತಾ ಅವರು. ಇಲ್ಲಿ ನಾವು ಹೇಳಹೊರಟಿರುವುದು ಸಗಣಿಯಿಂದ ಆಭರಣ ಸಿದ್ಧ ಪಡಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡವರ ಬಗ್ಗೆ.

ನೀವೀಗ ಸಗಣಿ ಎಂದು ಹೀಗಳೆಯುವ ಬದಲು ಕೊರಳಿಗೂ ಧರಿಸಬಹುದು. ಪ್ರೇಮ ಅವರು ಸಗಣಿಯ ಆಭರಣ ತಯಾರಿಸಿ ಅವುಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ.

ಗೋವಿನ ಹಾಲಿನಿಂದ ಹಿಡಿದು ಗೋವಿನ ಸಗಣಿಯಿಂದ 2000 ಕ್ಕೂ ಹೆಚ್ಚು ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದ್ದು, ಇದು ಪರಿಸರದ ದೃಷ್ಟಿಯಿಂದ ಸಾವಯವ ಮತ್ತು ನೈರ್ಮಲ್ಯದ ದೃಷ್ಠಿಯಿಂದ ಕೂಡಿದೆ. ಆಭರಣಗಳ ಜೊತೆಗೆ ಗೃಹೋಪಯೋಗಿ ವಸ್ತುಗಳು , ಪೂಜೆಗೆ ಬೇಕಾದ ವಸ್ತುಗಳು , ಅಗರಬತ್ತಿಗಳು , ಮನೆ ಅಲಂಕಾರ ವಸ್ತುಗಳು, ವಿಗ್ರಹಗಳು, ಸಗಣಿ ಇಟ್ಟಿಗೆಗಳು, ಚಪ್ಪಲಿಗಳು, ಕೈಗಡಿಯಾರಗಳು, ನಾನಾ ಉತ್ಪನ್ನಗಳನ್ನು ತಯಾರಿಸಿ
ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ.

ಅಷ್ಟೇ ಅಲ್ಲದೆ ವಿವಿಧ ರಾಜ್ಯಗಳು ಮತ್ತು ಸಣ್ಣ ಹಳ್ಳಿಗಳು , ಪಟ್ಟಣಗಳಿಗೆ ಹೋಗಿ ಸುಮಾರು 30 ವರ್ಷಗಳಿಂದ ಅಲ್ಲಿನ ಮಹಿಳೆಯರು ಮತ್ತು ನಿರುದ್ಯೋಗಿಗಳಿಗೆ ಗೋವಿನ ಸಗಣಿ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ತರಬೇತಿ ನೀಡುವ ಮೂಲಕ ಇತರ ಮಹಿಳೆಯರನ್ನು ಸ್ವಾವಲಂಬಿಗಳಾಗಿರಲು ಪ್ರೇರೇಪಿಸುತ್ತಿದ್ದಾರೆ.

Related post

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ ಲಾಭ ಗಳಿಸಬಹುದು – ಟಾಪ್ 10 ಉದ್ಯಮಗಳ ಮಾಹಿತಿ ಇಲ್ಲಿವೆ ನೋಡಿ…

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ…

ನ್ಯೂಸ್ ಆ್ಯರೋ : ಯಾವುದೇ ಲಾಭದಾಯಕ ವ್ಯವಹಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಬಹುದು. ಆದರೆ ವ್ಯಾಪಾರ ಕೈಹಿಡಿಯುವುದು ತುಂಬಾನೇ ಕಷ್ಟ.…
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ…

ನ್ಯೂಸ್ ಆ್ಯರೋ‌ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ…

Leave a Reply

Your email address will not be published. Required fields are marked *