ಅಡಿಕೆಗೆ ಔಷಧ ಸಿಂಪಡನೆ ಈಗ ಸುಲಭ, ಮರ, ಏಣಿ ಹತ್ತ ಬೇಕಿಲ್ಲ; ಮತ್ತೆ ಹೇಗೆ ಅಂತಿರಾ…! ಇಲ್ಲಿದೆ ಸಂಪೂರ್ಣ ಮಾಹಿತಿ

ಅಡಿಕೆಗೆ ಔಷಧ ಸಿಂಪಡನೆ ಈಗ ಸುಲಭ, ಮರ, ಏಣಿ ಹತ್ತ ಬೇಕಿಲ್ಲ; ಮತ್ತೆ ಹೇಗೆ ಅಂತಿರಾ…! ಇಲ್ಲಿದೆ ಸಂಪೂರ್ಣ ಮಾಹಿತಿ

ಕೃಷಿಲೋಕ: ಕರಾವಳಿ, ಮಲೆನಾಡಿನಲ್ಲಿ ಮಳೆಗಾಲ ಬಂತೆಂದರೆ ಅಡಿಕೆ ಕೃಷಿಕರು ಕೃಷಿಗಳಿಗೆ ಔಷಧಿ ಸಿಂಪಡನೆ ಬಗ್ಗೆ ಹೆಚ್ಚು ತಲೆ‌ ಕೆಡಿಸಿಕೊಳ್ಳುತ್ತಾರೆ. ಕಾರ್ಮಿಕರ ಕೊರತೆ, ಸೇರಿದಂತೆ ವಿವಿಧ ಕಾರಣಗಳಿವೆ. ಅದಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲಿ ಯಾಂತ್ರಿಕತೆಗೆ ಒಗ್ಗಿಕೊಂಡು ಬದಲಾವಣೆ ತಂದಿದಂತು ನಿಜ. ಈ ಹಿಂದೆ ಅಡಿಕೆಗೆ ಔಷಧಿ ಸಿಂಪಡನೆಗೆ ಪಂಪ್ ಗಾಳಿ ಹಾಕುವ ಮೂಲಕ, ಔಷಧಿ ಬಿಡುತ್ತಿದ್ದರು. ಮರ ಹತ್ತಿ ಸಿಂಪಡನೆ ಕಾರ್ಯ ನಡೆಯುತ್ತಿತ್ತು.

ಬದಲಾವಣೆ

ಬಳಿಕ ಗಾಳಿ ಹಾಕುವ ಬದಲಿಗೆ ಇಂಧನ ಬಳಸಿ ಮೋಟಾರ್ ಚಾಲು ಮಾಡುವ ಮೂಲಕ ಬದಲಾಯಿತು. ಮರ ಹತ್ತುವಲ್ಲಿಗೆ ಏಣಿ ಬಂತು. ಬೇರೆ ಸುಧಾರಿತ ಸಾಧನಗಳೂ ಮರ ಹತ್ತಲು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಕಾರ್ಬನ್ ಫೈಬರ್ ದೋಂಟಿ

ಇದೀಗ ಅಡಿಕೆಗೆ ಔಷಧಿ ಸಿಂಪಡನೆಗೆ ಕಾರ್ಬನ್ ಫೈಬರ್ ದೋಂಟಿ ಎಂಬ ಸುಧಾರಿತ ಸಾಧನ ಕೃಷಿಕರ ಕೈ ಮುಟ್ಟಿವೆ. ಕಾರ್ಬನ್ ಫೈಬರ್ ದೋಂಟಿ ಎಂದರೆ ಉದ್ದವಾದ ಪೈಬರ್ ಸಾಧನ. ಐದು ಫೀಟ್ ಗೆ ಒಂದರಂತೆ ಒಟ್ಟು ಎಂಟು ಅಂತಸ್ತು ಇದರಲ್ಲಿದೆ. ಒಂದೊಂದು ಅಂತಸ್ತಿಗೂ ಲಾಕ್‌ಮಾಡುವ ವಿಧಾನವಿದೆ.

ಸುಮಾರು 40ಫೀಟ್ ಎತ್ತರದ ವರೆಗೆ ಏರಿಸಬಹುದು ಹಾಗೂ ಕನಿಷ್ಠ ಐದು ಫೀಟ್ ತಗ್ಗಿಸಬಹುದು. ಇದು ಹಗುರವಾದ ಸಲಕರಣೆಯಾಗಿದೆ. ಈ ದೋಂಟಿಗೆ ಔಷಧಿ ಸಿಂಪಡನೆಯ ಪೈಪ್ ಹಾಗೂ ಕಂಟ್ರೋಲರ್ ಫಿಟ್ ಮಾಡಿ ಕೆಳ ಭಾಗದಲ್ಲಿ ಕಂಟ್ರೋಲ್ ಮಾಡುವಂತೆ ಮಾಡಲಾಗಿದೆ. ಉಳಿದಂತೆ ಕಾರ್ಬನ್ ಫೈಬರ್ ದೋಂಟಿಗೆ ಪಂಪ್ ನಿಂದ ಪೈಪ್ ಸಂಪರ್ಕ ನೀಡಲಾಗುತ್ತದೆ .

ಕಾರ್ಬನ್ ಫೈಬರ್ ದೋಂಟಿಯನ್ನು ಮರ ಹತ್ತಲೂ ತಿಳಿಯದವರೂ ಹಿಡಿದುಕೊಂಡು ಔಷಧಿ ಸಿಂಪಡಿಸಬಹುದು. ಒಟ್ಟು ಕನಿಷ್ಠ ಇಬ್ಬರು ಇದ್ದರೂ ಇಲ್ಲಿ‌ ಸಾಕಾಗುತ್ತದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಈ ತರಹದ ಕಾರ್ಬನ್ ಫೈಬರ್ ದೋಂಟಿಯನ್ನುತಯಾರಿಸುವ ಕಂಪನಿಗಳು ಲಗ್ಗೆ ಇಟ್ಟಿದ್ದು ಖರೀದಿ ಮಾಡುವಾಗ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಿಕೊಳ್ಳಿ ಎಂದು ಈ ದೋಂಟಿಯನ್ನು ಬಳಸುತ್ತಿರುವ ಕಡಬ ತಾಲೂಕಿನ ನೂಜಿಬಾಳ್ತಿಲದ ಬಸ್ತಿಯ ಪ್ರಗತಿಪರ ಕೃಷಿಕ ಉದಯ ಕುಮಾರ್ ಜೈನ್ ತಿಳಿಸಿದ್ದಾರೆ

ಅಂದಹಾಗೆ ಈ ಕಾರ್ಬನ್ ಫೈಬರ್ ದೋಂಟಿಯ ಬೆಲೆ ಅಂದಾಜು ರೂ. 30,000, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಉದಯ ಕುಮಾರ್ ಜೈನ್ ಬಸ್ತಿ ದೂರವಾಣಿ ಸಂಖ್ಯೆ : +91 97409 64677

ಕೃಷಿಗೆ ಸಂಬಂಧಿಸಿದ ಲೇಖನಗಳಿಗೆ ಸದಾ ಸ್ವಾಗತ.
ಕೃಷಿಲೋಕಕ್ಕೆ ನೀವೂ ಕೂಡ ಲೇಖನಗಳನ್ನು ಬರೆಯಬಹುದು. ಕೃಷಿಯಾಧಾರಿತ ಯಾವುದೇ ಲೇಖನಗಳು, ಸುದ್ದಿಗಳಿದ್ದರೂ ನಮಗೆ ಕಳುಹಿಸಿಕೊಡಬಹುದು. ನಿಮ್ಮ ಉತ್ತಮ ಬರಹಕ್ಕೆ ನಾವು ವೇದಿಕೆ ಒದಗಿಸಲಿದ್ದೇವೆ.
ಸಂಪರ್ಕಕ್ಕಾಗಿ :
+91 8431215975, +91 7760479111

Related post

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ ಲಾಭ ಗಳಿಸಬಹುದು – ಟಾಪ್ 10 ಉದ್ಯಮಗಳ ಮಾಹಿತಿ ಇಲ್ಲಿವೆ ನೋಡಿ…

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ…

ನ್ಯೂಸ್ ಆ್ಯರೋ : ಯಾವುದೇ ಲಾಭದಾಯಕ ವ್ಯವಹಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಬಹುದು. ಆದರೆ ವ್ಯಾಪಾರ ಕೈಹಿಡಿಯುವುದು ತುಂಬಾನೇ ಕಷ್ಟ.…
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ…

ನ್ಯೂಸ್ ಆ್ಯರೋ‌ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ…

Leave a Reply

Your email address will not be published. Required fields are marked *