- ಕೃಷಿ ವಿಜ್ಞಾನ
- December 2, 2022
- No Comment
- 2298
ಉತ್ತಮ ಫಲವತ್ತತೆ ನೀಡುವ ತೆಂಗಿನ ನಾರಿನ ಕಾಂಪೋಸ್ಟ್ ಬಗ್ಗೆ ನಿಮಗ್ಗೊತ್ತಾ..!? ಬಲು ಉಪಯುಕ್ತವಾಗಿರುವ, ಕಡಿಮೆ ಖರ್ಚಿನ ಈ ಗೊಬ್ಬರ ತಯಾರಿಸುವುದೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಕೃಷಿ ಲೋಕ : ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗಿನಕಾಯಿ ಯಾರಿಗೆ ಬೇಡ ಹೇಳಿ? ತಿನ್ನುವ ಆಹಾರದಿಂದ ಹಿಡಿದು ಧಾರ್ಮಿಕ ಆಚರಣೆಗಳಲ್ಲಿ, ಗೃಹೋಪಯೋಗಿಯಾಗಿ, ಔಷಧವಾಗಿ, ಉರುವಲಾಗಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ತೆಂಗಿನ ಉಪಯೋಗ ನೂರಾರು. ಹೀಗೆ ಕಲ್ಪವೃಕ್ಷ ಎಂದೇ ಕರೆಯುವ ತೆಂಗಿನನಾರಿನ ಪುಡಿಯಿಂದ ಗೊಬ್ಬರವನ್ನು ತಯಾರಿಸಿ ಬಹುದಾಗಿದ್ದು, ಸಸಿಗಳ ಶೀಘ್ರ ಬೆಳವಣಿಗೆಗೆ ಈ ನಾರಿನ ಗೊಬ್ಬರ ಅನುಕೂಲವಾಗುತ್ತದೆ. ಹಾಗಾಗಿ ತೆಂಗಿನ ನಾರಿನಿಂದ ಹೇಗೆ ಗೊಬ್ಬರ ತಯಾರಿಸಿಕೊಂಡು ನರ್ಸರಿಗೆ ಬಳಸಬೇಕು ಎಂಬ ಮಾಹಿತಿ ಇಲ್ಲಿದೆ.

ರಾಸಾಯನಿಕ ಗೊಬ್ಬರ ಹಾಕಿದರೆ ಪರಿಸರಕ್ಕೆ ಹಾನಿಯಾಗಿದ್ದು, ತೆಂಗಿನ ನಾರಿನ ಗೊಬ್ಬರ ಪರಿಸರಸ್ನೇಹಿಯಾಗಿದೆ. ತೆಂಗಿನ ನಾರಿನಿಂದ ಗೊಬ್ಬರ ತಯಾರಿಸಲು ಸಾಂಪ್ರದಾಯಿಕ ವಿಧಾನವಷ್ಟೇ ಅಲ್ಲದೆ ಸುಧಾರಿತ ಪದ್ದತಿಯಲ್ಲಿ ಗೊಬ್ಬರ ತಯಾರು ಮಾಡಿ ಉಪಯೋಗಿಸಬಹುದು.
ನಾಟಿ ಮಾಡುವ ಮೊದಲು ಮಣ್ಣಿನಲ್ಲಿ ಕೋಕೋ ಪಿಟ್ ಅನ್ನು ಬಳಸಲಾಗುತ್ತದೆ. ಇದನ್ನು ತೆಂಗಿನ ಸಿಪ್ಪೆಯಿಂದ ತಯಾರಿಸಲಾಗುತ್ತದೆ. ಇದರಿಂದ ಸಸ್ಯಗಳು ಪೋಷಣೆ ಪಡೆಯುತ್ತವೆ ಮತ್ತು ಮಡಕೆಯಲ್ಲಿ ಕೋಕೋಪೀಟ್ ಅನ್ನು ಮಣ್ಣಿನೊಂದಿಗೆ ಬೆರೆಸುವ ಮೂಲಕ ಅವುಗಳ ಬೆಳವಣಿಗೆ ಸರಿಯಾಗಿ ಆಗುತ್ತದೆ. ಗಿಡಗಳು ಚೆನ್ನಾಗಿ ಬೆಳೆಯಲು ಇದು ಸಹಕಾರಿ.

ಕೊಕೊ ಪೀಟ್ ಮಾಡಲು, ತೆಂಗಿನ ಸಿಪ್ಪೆಯನ್ನು ನೀರಿನಲ್ಲಿ ಅದ್ದಿ ಮತ್ತು 15 ದಿನಗಳವರೆಗೆ ಬಿಡಿ. 15 ದಿನಗಳ ನಂತರ ಅದನ್ನು ನೀರಿನಿಂದ ತೆಗೆಯಿರಿ ಮತ್ತು ಕತ್ತರಿ ಸಹಾಯದಿಂದ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಳಿಕ ಅದನ್ನು ಪುಡಿ ಮಾಡಿಕೊಳ್ಳಬೇಕು. ಇದನ್ನು ಕೋಕೋಪಿಟ್ ಎಂದು ಕರೆಯಲಾಗುತ್ತದೆ. ಇವು ಗಿಡಗಳಿಗೆ ಉತ್ತಮ ಫಲವತ್ತತೆ ನೀಡುತ್ತದೆ.
ಅಲ್ಲದೇ ತೆಂಗಿನ ತೋಟದಲ್ಲಿ ಸಿಗುವ ಕಚ್ಚಾವಸ್ತುಗಳನ್ನು ಬಳಸಿಕೊಂಡು ಗೊಬ್ಬರ ತಯಾರಿಸ ಬಹುದಾಗಿದ್ದು, ತೆಂಗಿನಕಾಯಿ ಸಿಪ್ಪೆಯನ್ನು ಆರು ತಿಂಗಳವರೆಗೆ ನೀರಿನಲ್ಲಿ ಕೊಳೆಸಿ ಯಂತ್ರದಲ್ಲಿ ಪುಡಿ ಮಾಡಲಾಗುತ್ತದೆ. ನಂತರ ರಾಶಿಯಾಗಿ ಗುಡ್ಡೆ ಮಾಡಿದ ಒಂದು ಟನ್ ಕೊಕೊಪೀಟ್ ಪುಡಿಗೆ 250 ಲೀ. ಹಸುವಿನ ಗಂಜಲ ಮತ್ತು ಗೋವಿನ ಸಗಣಿಯನ್ನು ಬೆರೆಸಿ, ಪೂರ್ಣ ಪ್ರಮಾಣದಲ್ಲಿ ನೀರನ್ನು ಹಾಕಿ ಮಿಶ್ರಣ ಮಾಡಲಾಗುತ್ತದೆ. ಈ ರೀತಿ ಮಾಡಿದ 15 ದಿನಗಳೊಳಗೆ ಸಾವಯವ ಕೊಕೋಪಿಟ್ ಸಿದ್ಧವಾಗುತ್ತದೆ.

ತೋಟಗಾರಿಕೆ ಬೆಳೆಗಳು, ತರಕಾರಿ ಬೆಳೆಗಳು ಹಾಗೂ ಟೆರೇಸ್ ಗಾರ್ಡನ್ ಮತ್ತು ನರ್ಸರಿಗಳಲ್ಲಿ ಕೊಕೊಪೀಟ್ ಗೊಬ್ಬರವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದ್ದರಿಂದ ಈ ಗೊಬ್ಬರಕ್ಕೆ ಬಹು ಬೇಡಿಕೆಯಿದೆ.