ಅಡಕೆ ಗಿಡದ ಎಲೆಚುಕ್ಕಿ ರೋಗಕ್ಕೆ ಡ್ರೋನ್ ಮೂಲಕ ಔಷಧಿ ಸಿಂಪಡಣೆ – 15 ನಿಮಿಷದಲ್ಲಿ 1ಎಕರೆಗೆ ಸ್ಪ್ರೇ ಸಾಧ್ಯ, ಖರ್ಚು ಕೇವಲ 1,400/- ಅಷ್ಟೇ..!! ವಿವರ ಇಲ್ಲಿದೆ…

ಅಡಕೆ ಗಿಡದ ಎಲೆಚುಕ್ಕಿ ರೋಗಕ್ಕೆ ಡ್ರೋನ್ ಮೂಲಕ ಔಷಧಿ ಸಿಂಪಡಣೆ – 15 ನಿಮಿಷದಲ್ಲಿ 1ಎಕರೆಗೆ ಸ್ಪ್ರೇ ಸಾಧ್ಯ, ಖರ್ಚು ಕೇವಲ 1,400/- ಅಷ್ಟೇ..!! ವಿವರ ಇಲ್ಲಿದೆ…

ಕೃಷಿಲೋಕ : ಅಡಕೆ ಗಿಡಗಳಿಗೆ ಔಷದಿ ಸಿಂಪಡನೆ ಮಾಡುವ ಉದ್ದೇಶದಿಂದ ಇದೀಗ ನೂತನ ತಂತ್ರಜ್ಞಾನವೊಂದನ್ನು ಆವಿಷ್ಕರಿಸಲಾಗಿದೆ. ಈ ತಂತ್ರಜ್ಞಾನದ ನೆರವಿನಿಂದ ಕಡಿಮೆ ಸಮಯದಲ್ಲಿ ಹೆಚ್ಚು ಪ್ರದೇಶಕ್ಕೆ ಸುಲಭವಾಗಿ ಔಷಧಿ ಸಿಂಪಡಣೆ ಮಾಡಬಹುದಾಗಿದೆ. ಈ ಹಿಂದೆ ಸಾಂಪ್ರದಾಯಿಕ ಮಾದರಿಯಲ್ಲಿ ಅಡಿಕೆ ಮರವೇರಿ ದೋಟಿಯ ಮೂಲಕ ಕೃಷಿಕರು ಔಷಧಿ ಸಿಂಪಡನೆ ಮಾಡುತ್ತಿದ್ದು ಇದೀಗ ಡ್ರೋನ್ ಮೂಲಕ ವೈಜ್ಞಾನಿಕ ಮಾರ್ಗ ತೆರೆದುಕೊಂಡಿದೆ.

ಸದ್ಯ ನಾಡಿನಾದ್ಯಂತ ಅಡಕೆ ಕೃಷಿಗೆ ಎಲೆ ಚುಕ್ಕಿ ರೋಗ ವಕ್ಕರಿಸಿದ್ದು ಕೃಷಿಕರು ಕಂಗೆಡುವಂತೆ ಮಾಡಿದೆ. ಆದರೆ ಕೆಲ ಬುದ್ದಿವಂತ ರೈತರು ಕೆಲ ತಿಂಗಳುಗಳಿಂದ ಮಲೆನಾಡು, ಬಯಲು ಸೀಮಿಗಳಲ್ಲಿ ಈ ರೋಗ ತಡೆಗಟ್ಟಲು ಡ್ರೋನ್‌ ಮೂಲಕ ಔಷಧಿ ಸಿಂಪಡಿಸುವ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಇದೇ ಕ್ರಮವನ್ನು ಕರಾವಳಿ ಭಾಗದ ಕೃಷಿಕರೂ ಹಿಂಬಾಲಿಸಲು ಉತ್ಸುಕರಾಗಿದ್ದು ಮುಂದಿನ ದಿನಗಳಲ್ಲಿ ಕರಾವಳಿಯ ಅಡಕೆ ತೋಟಗಳ ಮೇಲೂ ಔಷಧಿ ಹೊತ್ತು ಡ್ರೋನ್ ಗಳು ಹಾರಾಟ ನಡೆಸಲಿವೆ.

ಕೃಷಿ ಸ್ನೇಹಿ ವಿಧಾನ:

ಡ್ರೋನ್ ಮೂಲಕ ಅಡಕೆ ತೋಟಕ್ಕೆ ಔಷಧಿ ಸಿಂಪಡೆನೆ ಮಾಡುವುದು ಸುಲಭದ ವಿಧಾನವಾಗಿದ್ದು ಇದರಿಂದಾಗಿ ಕಾರ್ಮಿಕರ ಕೊರತೆಯೂ ನೀಗಲಿದೆ. ಜೊತೆಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ನಡೆಯುತ್ತದೆ. ಈ ಔಷಧಿ ಸಿಂಪಡಣಾ ವಿಧಾನದಿಂದ ಮನುಷ್ಯರ ಆರೋಗ್ಯಕ್ಕೂ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ತಜ್ಞರು ಧೃಡ ಪಡಿಸಿದ್ದಾರೆ‌. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಡ್ರೋನ್ ಪ್ರೈ.ಲಿ ಈ ಕೃಷಿ ಸ್ನೇಹಿ ಡ್ರೋನ್ ಅಭಿವೃದ್ಧಿ ಪಡಿಸಿದ್ದು, ಅಗತ್ಯ ಬೀಳುವ ತೋಟಗಳಿಗೆ ಅಲ್ಲಿನ‌ ತಂಡ ಇಬ್ಬರು ಪೈಲೆಟ್ ಗಳೊಂದಿಗೆ ಆಗಮಿಸಿ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡುತ್ತಾರೆ. ಔಷಧಿ ದ್ರಾವಣವನ್ನು ಕೃಷಿಕರೆ ಸಿದ್ಧಪಡಿಸಬೇಕು. ಮಳೆ ಬರುತ್ತಿದ್ದರೆ ಸಿಂಪಡಣೆ ಕಷ್ಟ, ಇನ್ನುಳಿದ ಎಲ್ಲಾ ಋತುಗಳಲ್ಲೂ ಡ್ರೋನ್ ಕೆಲಸ ಮಾಡುತ್ತದೆ.

ಡ್ರೋನ್ ಮೂಲಕ ಸಿಂಪಡಣೆ ಹೇಗೆ?

ಡ್ರೋನ್ ನಲ್ಲಿ ಒಂದು ಬಾರಿಗೆ 20 ಲೀಟರ್ ಔಷಧಿ ತುಂಬಬಹುದಾಗಿದೆ. ಇದು ಕೇವಲ 15 ನಿಮಿಷಗಳಲ್ಲಿ ಒಂದು ಎಕರೆ ತೋಟಕ್ಕೆ ಔಷಧಿ ಸಿಂಪಡಿಸುತ್ತದೆ. ಒಂದು ಎಕರೆಗೆ 1,400 ರೂ. ಖರ್ಚಾಗುತ್ತದೆ. ಸದ್ಯ ಜಿಲ್ಲೆಯ ಕಳೆಂಜದಲ್ಲಿ ಡ್ರೋನ್ ಮೂಲಕ ಕೈಗೊಂಡ ಔಷಧ ಸಿಂಪಡಣೆ ಯಶಸ್ವಿಯಾಗಿದೆ.

ಡ್ರೋನ್ ಮೂಲಕ ಔಷಧಿ ಸಿಂಪಡಿಸಿದರೆ ಹಿಂಗಾರಕ್ಕೆ ಅಷ್ಟಾಗಿ ಔಷಧಿ ತಲುಪುವುದಿಲ್ಲ. ಆದರೂ 35% ಔಷಧಿ ಹಿಂಗಾರಕ್ಕೆ ಬೀಳುತ್ತದೆ. ಜೊತೆಗೆ ಬೋರ್ಡ್ ದ್ರಾವಣದ ಸಿಂಪಡಣೆ ಕಷ್ಟ. ಇದನ್ನು ಬಿಟ್ಟು ಡ್ರೋನ್ ಮೂಲಕ ಔಷಧ ಸಿಂಪಡಣೆ ಮಾಡುವುದರಲ್ಲಿ ಯಾವುದೇ ಕೊರತೆಯಿಲ್ಲ. ಪ್ರತಿ 20 ಲೀಟರ್ ಔಷಧಿ ಸಿಂಪಡಣೆಯ ಬಳಿಕ ಡ್ರೋನ್ ಬ್ಯಾಟರಿ ಬದಲಾಯಿಸಬೇಕಾಗುತ್ತದೆ. ಇಲ್ಲಿಯ ವರೆಗೆ ದ.ಕ ಮತ್ತು‌ ಕಾಸರಗೋಡು ಜಿಲ್ಲೆಯ ಒಟ್ಟು 3 ಸಾವಿರ ಎಕರೆ ರೋಗಪೀಡಿತ ಅಡಕೆ ತೋಟಗಳಿಗೆ ಡ್ರೋನ್ ಮೂಲಕ ಔಷಧ ಸಿಂಪಡಣೆ ಮಾಡಲಾಗಿದೆ.

ಕೇವಲ ಅಡಕೆ ಕೃಷಿಗಷ್ಟೇ ಅಲ್ಲದೆ ತೆಂಗು, ರಬ್ಬರ್, ದ್ರಾಕ್ಷಿ ಇತ್ಯಾದಿ ಕೃಷಿಗೂ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಸಾಧ್ಯವಾಗುತ್ತದೆ. ಇಂತಹ ಕೃಷಿಸ್ನೇಹಿ ತಂತ್ರಜ್ಞಾನವನ್ನು ಬಳಸುವುದರಿಂದ ಕೃಷಿಕರಿಗೆ ಖರ್ಚು ಕಡಿಮೆಯಾಗಲಿದೆ ಎಂಬುದು ಡ್ರೋನ್ ಮೂಲಕ ಔಷಧಿ ಸಿಂಪಡಿಸಿಕೊಂಡು ಯಶಸ್ವಿಯಾದ ತೋಟದ ಮಾಲಿಕ ಅಭಿಪ್ರಾಯ.

Related post

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ ಲಾಭ ಗಳಿಸಬಹುದು – ಟಾಪ್ 10 ಉದ್ಯಮಗಳ ಮಾಹಿತಿ ಇಲ್ಲಿವೆ ನೋಡಿ…

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ…

ನ್ಯೂಸ್ ಆ್ಯರೋ : ಯಾವುದೇ ಲಾಭದಾಯಕ ವ್ಯವಹಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಬಹುದು. ಆದರೆ ವ್ಯಾಪಾರ ಕೈಹಿಡಿಯುವುದು ತುಂಬಾನೇ ಕಷ್ಟ.…
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ…

ನ್ಯೂಸ್ ಆ್ಯರೋ‌ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ…

Leave a Reply

Your email address will not be published. Required fields are marked *