- ಹವಾಮಾನ ವರದಿ
- March 28, 2022
- No Comment
- 654
ಹವಾಮಾನ ವರದಿ : 28-03-2022 | ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

29.03.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕೃಷಿ ಲೋಕ: ಕೊಡಗು, ಆಗುಂಬೆ, ಶಿೃಂಗೇರಿ ಸುತ್ತಮುತ್ತ ಭಾಗಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಅಥವಾ ತುಂತುರು ಮಳೆಯ ಮುನ್ಸೂಚನೆ ಇದೆ.
ಈಗಿನ ಮುನ್ಸೂಚೆನೆಯಂತೆ ಮುಂದಿನ 10 ದಿನಗಳವರೆಗೂ ರಾಜ್ಯದಾದ್ಯಂತ ಭಾರಿ ಮಳೆಯ ಸಾಧ್ಯತೆ ಕಡಿಮೆ ಇದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯ (0-5mm) ಸಾಧ್ಯತೆ ಇರಬಹುದು.
ಅನಿರೀಕ್ಷಿತ ಬದಲಾವಣೆ ಹೊರತು ಪಡಿಸಿ ಈ ಸೂಚನೆ ನೀಡಲಾಗಿದೆ. ಬದಲಾವಣೆಗಳನ್ನು ಆಮೇಲೆ ನೀಡಲಾಗುವುದು.

ಮೂಲತಃ ಕೃಷಿಕರಾಗಿದ್ದು,, ಪದವೀಧರರಾಗಿರುವ ಇವರು ಶೇರ್ ಬ್ರೋಕರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಹವಾಮಾನ ಅಭ್ಯಸಿಸುವುದು ಇವರ ಹವ್ಯಾಸ. ಇವರ ಹವಾಮಾನ ವರದಿಯನ್ನು ನಿತ್ಯವೂ ಕೃಷಿಲೋಕ.ಕಾಮ್ ನಲ್ಲಿ ನೋಡಬಹುದಾಗಿದೆ.
? +917026170040