- ಹವಾಮಾನ ವರದಿ
- April 11, 2022
- No Comment
- 937
ಹವಾಮಾನ ವರದಿ 10-04-2022 | ವಾಯುಭಾರ ಕುಸಿತ, ಹಲವೆಡೆ ಮಳೆಯ ಮುನ್ಸೂಚನೆ

12.04.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕೃಷಿ ಲೋಕ: ಕೊಡಗು ಅಲ್ಲಲ್ಲಿ ಹಾಗೂ ಆಗುಂಬೆ, ಶಿೃಂಗೇರಿ, ತೀರ್ಥಹಳ್ಳಿ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಅಥವಾ ತುಂತುರು ಮಳೆಯ ಮುನ್ಸೂಚನೆ ಇದೆ

ವಾಯುಭಾರ ಕುಸಿತ : ಶ್ರೀಲಂಕಾ ಉತ್ತರ – ತಮಿಳುನಾಡು ಕರಾವಳಿಯಲ್ಲಿ ಹಾಗೂ ಮಧ್ಯ ಶ್ರೀಲಂಕಾ ಪೂರ್ವ ಕರಾವಳಿಯಲ್ಲಿ ಒಟ್ಟು 2 ವಾಯುಭಾರ ಕುಸಿತದಂತಹ ತಿರುಗುವಿಕೆ ಉಂಟಾಗಿದೆ.
ಇದರ ಪ್ರಭಾವದಿಂದ ಅನಿರೀಕ್ಷಿತವಾಗಿ ಉತ್ತರ ಕರ್ನಾಟಕದ ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ.

ಮೂಲತಃ ಕೃಷಿಕರಾಗಿದ್ದು,, ಪದವೀಧರರಾಗಿರುವ ಇವರು ಶೇರ್ ಬ್ರೋಕರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಹವಾಮಾನ ಅಭ್ಯಸಿಸುವುದು ಇವರ ಹವ್ಯಾಸ. ಇವರ ಹವಾಮಾನ ವರದಿಯನ್ನು ನಿತ್ಯವೂ ಕೃಷಿಲೋಕ.ಕಾಮ್ ನಲ್ಲಿ ನೋಡಬಹುದಾಗಿದೆ.
? +917026170040