- ಹವಾಮಾನ ವರದಿ
- April 26, 2022
- No Comment
- 1326
ಹವಾಮಾನ ವರದಿ 26-04-2022 । ಅವಧಿ ಪೂರ್ವ ಮುಂಗಾರು ಸಾಧ್ಯತೆ

27.04.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕೃಷಿ ಲೋಕ: ಕೊಡಗು, ಸೋಮವಾರಪೇಟೆ,ಸಕಲೇಶಪುರ, ಮೂಡಿಗೆರೆ, ಆಗುಂಬೆ,ಶೃಂಗೇರಿ, ತೀರ್ಥಹಳ್ಳಿ, ಹೊಸನಗರ, ಸಾಗರ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.
ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡದ ಹೆಚ್ಚಿನ ಭಾಗಗಳಲ್ಲಿ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ.
ಮುಂಗಾರು : ಎಪ್ರಿಲ್ 30ರ ಮೇಲಿನ ನಕ್ಷೆಯಲ್ಲಿ ಮುಂಗಾರು ಮಾದರಿಯ ಚಲನೆಯ ಮುನ್ಸೂಚೆನೆ ಇದೆ. ಇದರ ಆಧಾರದ ಮೇಲೆ ಈ ಸಲದ ಮುಂಗಾರು ಅವಧಿ ಪೂರ್ವ ಬರುವ ನಿರೀಕ್ಷೆ ಇದೆ.

ಮೂಲತಃ ಕೃಷಿಕರಾಗಿದ್ದು,, ಪದವೀಧರರಾಗಿರುವ ಇವರು ಶೇರ್ ಬ್ರೋಕರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಹವಾಮಾನ ಅಭ್ಯಸಿಸುವುದು ಇವರ ಹವ್ಯಾಸ. ಇವರ ಹವಾಮಾನ ವರದಿಯನ್ನು ನಿತ್ಯವೂ ಕೃಷಿಲೋಕ.ಕಾಮ್ ನಲ್ಲಿ ನೋಡಬಹುದಾಗಿದೆ.
? +917026170040